ಲೈಫ್ ಸ್ಟೈಲ್

ಗ್ಲಾಮರ್ ಡಾಲ್ಗಳ ಜಬರ್ದಸ್ತ್ ಪಾರ್ಟಿ ಔಟ್ಫಿಟ್..!

Published

on

  • ಚಿತ್ರಶ್ರೀ ಹರ್ಷ

ವಿಶ್ವದೆಲ್ಲೆಡೆ ವರ್ಷಾಂತ್ಯಕ್ಕೆ ದಿನಗಣನೆ ಶುರುವಾಗಿದ್ದು ಹೊಸ ವರ್ಷದ ಆಗಮನದ ಸಂಭ್ರಮಾಚರಣೆಯಲ್ಲಿ ಮುಳಿಗೆದ್ದಿದೆ ಫ್ಯಾಷನ್ ಲೋಕ. ಬೆಡಗು ಬಿನ್ನಾಣಕ್ಕೆ ಕುಂದು ಬಾರದಂತೆ ಜಗಮಗಿಸುವ ನೂತನ ವರ್ಷಾಚರಣೆಯ ಪಾರ್ಟಿ ಫೀವರ್ ನ ಟೆಂಪರೇಚರ್ ಹೆಚ್ಚಿಸುತ್ತಿವೆ ಸೀಕ್ವೀನ್ ಪಾರ್ಟಿ ಡ್ರೆಸ್ ಗಳು.

ಸಖತ್ ಹಾಟ್ ಏನಿಸುವ ವೆಸ್ಟರ್ನ್‌ ಕಾನ್ಸೆಪ್ಟ್ನಲ್ಲಿ ಟ್ರೆಂಡ್ ಆಗಿದೆ ಸೀಕ್ವೀನ್ ಫ್ಯಾಷನ್. ಹಾಲಿವುಡ್ ನಿಂದ ಹಾರಿ ಬಂದು, ಬಾಲಿವುಡ್ ನಿಂದ ಟಾಲಿವುಡ್ ನಟೀಮಣಿಯರಿಗೂ ಫೇವರಿಟ್ ಎನಿಸಿದೆ. ಟೀನೇಜ್ ಬೆಡಗಿಯರ ಹಾಟ್ ಪಾರ್ಟಿ ಲುಕ್ ನ ಸ್ಟೈಲ್ ಸ್ಟೇಟ್ ಮೆಂಟ್ ಆಗಿದೆ ಸೀಕ್ವೀನ್ ಫ್ಯಾಷನ್ ಉಡುಪುಗಳು.

ಈ ವರ್ಷದ ಚಳಿಗಾಲದ ಟ್ರೆಂಡ್ ಆಗಿ ಸೀಕ್ವೀನ್  ಉಡುಪು ಗಳು ಫ್ಯಾಷನ್ ಕ್ಷೇತ್ರದಲ್ಲಿ ಸದ್ದು ಮಾಡುತ್ತಿವೆ. ಈ ಬಾರಿಯ ಡಿಸೆಂಬರ್ ಪಾರ್ಟಿ ಗಳಲ್ಲಿ ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಸೀಕ್ವೀನ್, ಗ್ಲಿಟರ್ ಉಡುಪುಗಳನ್ನೇ ತೊಟ್ಟು ಮಿಂಚಿರುವುದು ವಿಶೇಷ.

ಸೀಕ್ವೀನ್ ಗ್ಲಿಟರ್ ಉಡುಪುಗಳು ಭಿನ್ನವಾಗಿ ಗಮನ ಸೆಳೆಯುವುದಲ್ಲದೇ, ನಾಲ್ಕು ಜನರ ಮಧ್ಯೆ ನಿಮ್ಮನ್ನು ಆಕರ್ಷಣೆಯ ಕೇಂದ್ರ ಬಿಂದುವಾಗಿಸುತ್ತದೆ. ಆದ್ದರಿಂದ ಸೆಲೆಬ್ರಿಟಿಗಳು ಈ ಆಕರ್ಷಕ ಜಗಮಗಿಸುವ ಸೀಕ್ವೀನ್ ಉಡುಪುಗಳ ಮೊರೆ ಹೋಗುತ್ತಾರೆ ಎನ್ನುವುದು ಫ್ಯಾಷನ್ ಉದ್ಯಮದ ಮಾತು.

ಹಾಲಿವುಡ್–ಬಾಲಿವುಡ್ ಎರಡಲ್ಲೂ ಜನಪ್ರಿಯತೆ ಗಳಿಸಿರುವ ನಟಿ ಪ್ರಿಯಾಂಕ ಚೋಪ್ರಾ ,ದೀಪಿಕಾ ಪಡುಕೋಣೆ ಅವರಿಂದ ಹಿಡಿದು ತಮಿಳಿನ ನಯನತಾರಾ ವರೆಗೂ, ಸೀಕ್ವೀನ್ ಡ್ರೆಸ್ ಗಳ ಫ್ಯಾಷನ್ ಟ್ರೆಂಡ್ ಅಚ್ಚೊತ್ತಿದೆ.

ಕೇವಲ ಕೋಟ್ ಮತ್ತು ಜಾಕೆಟ್ ಗಳಿಗೆ ಸೀಮಿತವಾದ ಸೀಕ್ವೀನ್ ಫ್ಯಾಷನ್ ಈಗ ಉದ್ದನೆಯ ಗೌನ್‌, ಫ್ರಾಕ್ , ಪ್ಯಾಂಟ್ , ಸ್ಕರ್ಟ್,ಗಳ ರೂಪದಲ್ಲಿ ಸೆಲೆಬ್ರಿಟಿಗಳ ವಾರ್ಡ್‌ ರೋಬ್‌ನಲ್ಲಿ ಸ್ಥಾನಪಡೆದಿವೆ. ಹಾಗಾಗಿಯೇ ಸ್ಟೈಲ್ ಎಕ್ಸ್‌ಪರ್ಟ್ಸ್‌ಗಳು ತಮ್ಮ ವಿನ್ಯಾಸದ ಉಡುಪುಗಳಲ್ಲಿ ಕಡ್ಡಾಯವಾಗಿ ಗ್ಲಿಟರ್ ಸೀಕ್ವೀನ್ ವಸ್ತ್ರಗಳಿಗೆ ಆದ್ಯತೆ ನೀಡುತ್ತಿದ್ದಾರೆ.

“ಗ್ಲಿಟರ್ ಸೀಕ್ವೀನ್ ಫ್ಯಾಷನ್ ” ಈ ವರ್ಷದ ಹಾಟ್ ಪಾರ್ಟಿ ಟ್ರೆಂಡ್ ಆಗಿದೆ. 70ರ ದಶಕದಲ್ಲಿ ಉತ್ತುಂಗದ ಸ್ಥಿತಿಯಲ್ಲಿದ್ದ ಈ ಟ್ರೆಂಡ್ ಈಗ ಮರುಕಳಿಸಿದೆ. ಕೇವಲ ಯುವಪೀಳಿಗೆ ಅಷ್ಟೇ ಅಲ್ಲದೆ ಎಲ್ಲರೂ ಬಯಸುವ ಚುಮು ಚುಮು ಚುಮುಕಿಯ ಫಾಕ್ಸ್ ಫ್ಯಾಷನ್, ಎಲ್ಲಾ ವಯೋಮಾನದವರ ನ್ಯೂ ಇಯರ್ ಪಾರ್ಟಿ ಫ್ಯಾಬ್ರಿಕ್ ಆಗಿಬಿಟ್ಟಿದೆ ಎನ್ನುತ್ತಿದ್ದಾರೆ ಫ್ಯಾಷನ್ ಮಾಂತ್ರಿಕರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version