ದಿನದ ಸುದ್ದಿ
ಬೈಕ್ ಕಳವು ತಪ್ಪಿಸಲು ಬಂದಿದೆ ಹೊಸ ತಂತ್ರ !
ಸುದ್ದಿದಿನ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಬೈಕ್ ಕಳವು ಪ್ರಕರಣ ಹೆಚ್ಚಾಗಿವೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಕಳ್ಳರು ಕ್ಷಣಮಾತ್ರದಲ್ಲಿ ಬೈಕ್ ಕದ್ದು ಪರಾರಿ ಆಗಿಬಿಡುತ್ತಾರೆ. ಇದಕ್ಕೆ ಬ್ರೇಕ್ ಹಾಕಲು ಹೊಸ ತಂತ್ರಜ್ಞಾನ ಬಂದಿದೆ !
ಹೌದು, ವಾಹನ ಕಳ್ಳತನ ತಪ್ಪಿಸಲು ಅಸ್ಸಾಂ ನ ಭಾಸ್ಕರ್ ಬರ್ಮನ್ ಎಂಬಾತ ಹೊಸ ತಂತ್ರ ಕಂಡುಹಿಡಿದಿದ್ದಾನೆ.
ಬೈಕ್ ಚಾವಿಯ ಬದಲಿಗೆ ಪಾಸ್ ವರ್ಡ್ ಮೂಲಕ ಸ್ಟಾರ್ಟ್ ಆಗಲಿದೆ. ಇದಕ್ಕಾಗಿ ಬರ್ಮನ್ ಅವರು ಒಂದು ಚಿಕ್ಕ ಯಂತ್ರ ತಯಾರಿಸಿದ್ದು ಅದನ್ನು ಬೈಕ್ ಹ್ಯಾಂಡಲ್ ನಲ್ಲಿ ಅಳವಡಿಸಿ 1 ರಿಂದ 0 ವರೆಗಿನ ಅಂಕೆ ಬಳಸಿ ಬೈಕ್ ಲಾಕ್ ಮಾಡಬಹುದು. ಪಾಸ್ ವಾರ್ಡ್ ಪುನಃ ಟೈಪ್ ಮಾಡಿದರೆ ಬೈಕ್ ಸ್ಟಾರ್ಟ್ ಮಾಡಬಹುದು.