ದಿನದ ಸುದ್ದಿ
ಪತಂಜಲಿ ಸಿಮ್ ಮಾರುಕಟ್ಟೆಗೆ ; 5 ಲಕ್ಷದವರೆಗೆ ಬಂಪರ್ ಆಫರ್..!
ಸುದ್ದಿದಿನ ಡೆಸ್ಕ್ : ಪತಂಜಲಿ ಹೆಸರಿನಲ್ಲಿ ಕಂಪನಿಯನ್ನು ಸ್ಥಾಪಿಸಿ ದೇಸೀ ಉತ್ಪನ್ನಗಳನ್ನು ತಯಾರಿಸುತ್ತಾ ಹೆಸರುಗಳಿಸಿರುವ ಬಾಬಾ ರಾಮ್ ದೇವ್ ಇದೀಗ ಟೆಲಿಕಾಂ ಪ್ರಪಂಚಕ್ಕೂ ತಮ್ಮ ಉದ್ಯಮವನ್ನು ವಿಸ್ತರಿಸಿ ಕೊಂಡಿದ್ದಾರೆ. ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್ ಹೆಸರಿನಲ್ಲಿ ಪತಂಜಲಿ ಸಿಮ್ ಕಾರ್ಡ್ ಗಳನ್ನು ಅದ್ದೂರಿಯಾಗಿ ಲಾಂಚ್ ಮಾಡಿದ್ದಾರೆ.
ಇದಕ್ಕಾಗಿ ಸರಕಾರಿ ಸಂಸ್ಥೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಜತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಎರಡೂ ಕಂಪನಿಗಳು ಕೈ ಜೋಡಿಸಿ ಸ್ವದೇಸಿ-ಸಿಮ್ ಕಾರ್ಡ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.
ಈ ಕಂಪನಿ ನೀಡುವ ಸಿಮ್ ಕಾರ್ಡ್ ಗಳಿಂದ ಕೇವಲ 144 ರೂ ಗೆ ರೀಚಾರ್ಜ್ ಮಾಡಿಸಿಕೊಂಡರೆ ದೇಶದಾದ್ಯಂತ ಅಪರಿಮಿತ ಕರೆಗಳನ್ನು ಮಾಡಿಕೊಳ್ಳ ಬಹುದು. 2ಜಿಬಿ ಡಾಟಾ ಪ್ಯಾಕ್ ಜತೆಗೆ 100 ಎಸ್ ಎಂ ಎಸ್ ಗಳನ್ನು ಸಹ ಕಳುಹಿಸಬಹುದಾಗಿದೆ.
ಪತಂಜಲಿ ಸಿಮ್ ಮೊದಲು ಇವರಿಗಷ್ಟೇ ಲಭ್ಯ
ಈ ಕಂಪನಿಯ ಸಿಮ್ ಗಳು ಮೊದಲಿಗೆ, ಪತಂಜಲಿ ಕಂಪನಿಯ ಅಧಿಕಾರಿಗಳಿಗೆ ಹಾಗೂ ಉದ್ಯೋಗಿಗಳಿಗೆ ಮಾತ್ರ ನೀಡಲಿದ್ದಾರೆ. ಬಳಿಕ ಕೆಲವು ದಿನಗಳ ನಂತರ ಸಾರ್ವಜನಿಕರಿಗೆಲ್ಲಾ ದೊರೆಯುವ ವ್ಯವಸ್ಥೆ ಮಾಡಲಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಪತಂಜಲಿ ಉತ್ಪನ್ನಗಳ ಮೇಲೆ ಶೇ.10ರಷ್ಟು ಡಿಸ್ಕೌಟ್ ಕೂಡಾ ಪಡೆಯಬಹುದು.
ಪತಂಜಲಿ ಸಿಮ್ ಬಳಕೆದಾರರಿಗೆ ಜೀವವಿಮೆ
ಇಷ್ಟೇ ಅಲ್ಲದೇ ಪತಂಜಲಿ ಸಿಮ್ ಕಾರ್ಡ್ ಬಳಸುವ ಗರಾಹಕರಿಗೆ 2.5 ಲಕ್ಷದಿಂದ 5 ಲಕ್ಷದವರೆಗೆ ಆರೋಗ್ಯ, ಅಪಘಾತ, ಜೀವವಿಮೆಯನ್ನು ಸಹ ಜನರಿಗೆ ನೀಡುತ್ತೇವೆ. ಹಾಗೇ ಸ್ವದೇಶಿ ಸಂಸ್ಥೆಯಾಗಿರುವ ಬಿಎಸ್ಎನ್ಎಲ್ ಜತೆಗೆ ದೇಶದ ಒಳಿತಿಗಾಗಿಯೇ ಕೈಜೊಡಿಸಿದ್ದು. ಆದ್ದರಿಂದ ನಮ್ಮಿಬ್ಬರ ಉದ್ದೇಶ ಒಂದೇ ಆಗಿದೆ ಎಂದು ತಿಳಿಸಿದ್ದಾರೆ.