ದಿನದ ಸುದ್ದಿ
ಟೆಲಿಕಾಂ ಪ್ರಪಂಚಕ್ಕೂ ಕಾಲಿಟ್ಟ ಪತಂಜಲಿ
ಆಯುರ್ವೇದಿಕ್ ಉತ್ಪನ್ನಗಳಿಂದ ಹಿಡಿದು ದಿನಸಿ ಉತ್ಪನ್ನಗಳವರೆಗೂ ತನ್ನ ಅಧಿಪತ್ಯ ಸಾಧಿಸಿರುವ ಬಾಬಾ ರಾಮ್ ದೇವ್ ನೇತೃತ್ವದ ಪತಂಜಲಿ ಸಂಸ್ಥೆಯು ಇ ದೀಗ ಟೆಲಿಕಾಂ ಕ್ಷೇತ್ರಕ್ಕೂ ಕಾಲಿಟ್ಟಿದೆ.
ಭಾರತೀಯ ದೂರ ಸಂಪರ್ಕ ನಿಗಮ (ಬಿಎಎಸ್ ಎನ್‍ಎಲ್) ಜತೆಗೂಡಿ ಸ್ವದೇಶಿ ಸಮೃದ್ಧಿ ಎಂಬ ಹೊಸ ಸಿಮ್ ಕಾರ್ಡ್‍ಗನ್ನು ಪತಂಜಲಿ ಬಿಡುಗಡೆ ಮಾಡಿದೆ. ಹರಿದ್ವಾರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬಾಬಾ ರಾಮ್ ದೇವ್ ಅವರು ಈ ಮಹತ್ವದ ಯೋಜನೆಯನ್ನು ಘೋಷಿಸಿದರು.
ಸದ್ಯಕ್ಕೆ ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್‍ಗಳನ್ನು ಪತಂಜಲಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿ ಮತ್ತು ಅಧಿಕಾರಿ ವರ್ಗದವರಿಗೆ ಮಾತ್ರ ನೀಡಲಾಗಿದೆ. ಭವಿಷ್ಯದಲ್ಲಿ ಇದನ್ನು ಭಾರತದ ಎಲ್ಲ ನಾಗರಿಕರಿಗೂ ನೀಡುವುದು ಪತಂಜಲಿ ಸಂಸ್ಥೆಯ ಗುರಿಯಾಗಿದೆ.
ಏನೇನು ಪ್ರಯೋಜನ
ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್ ಸಂಪರ್ಕ ಪಡೆಯುವವರಿಗೆ ಪತಂಜಲಿ ಉತ್ಪನ್ನಗಳ ಮೇಲೆ ಶೇ.10ರಷ್ಟು ರಿಯಾಯಿತಿ ದೊರೆಯಲಿದೆ.
ರಿಚಾರ್ಜ್: ಕೇವಲ 144 ರೂಪಾಯಿ ರೀಚಾರ್ಜ್ ಮಾಡಿಸಿದರೆ ಅನ್‍ಲಿಮಿಟೆಡ್ ಕರೆಗಳು ಹಾಗೂ 2 ಜಿಬಿ ಡೇಟಾ ಜತೆ ನೂರು ಎಸ್ಸೆಮ್ಮೆಸ್ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ.