ದಿನದ ಸುದ್ದಿ
ಸಮೂಹ ಮಾಧ್ಯಮಗಳಿಗೆ ದೇಶಪ್ರೇಮ ಆದ್ಯತೆಯಾಗಬೇಕು : ಸಚಿವ ಗೋವಿಂದ ಕಾರಜೋಳ
ಸುದ್ದಿದಿನ ಡೆಸ್ಕ್ : ಸಮೂಹ ಮಾಧ್ಯಮಗಳಿಗೆ ದೇಶ ಪ್ರೇಮ ಪ್ರಮುಖ ಆದ್ಯತೆಯಾಗಬೇಕು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. 12ನೇ ಶತಮಾನದ ಶರಣರು ಕನ್ನಡ ಸಾಹಿತ್ಯಕ್ಕೆ ಶ್ರೇಷ್ಠ ಸ್ಥಾನಮಾನ ತಂದುಕೊಟ್ಟಿದ್ದಾರೆ.
ಪತ್ರಕರ್ತರು ಕೂಡ ಸಾಹಿತಿಗಳೇ ವಸ್ತುನಿಷ್ಠ ವರದಿಯ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಿ, ಪತ್ರಿಕಾ ಧರ್ಮ ಪಾಲಿಸಬೇಕು ಎಂದು ಸಚಿವರು ಕರೆ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243