/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಲೈಫ್ ಸ್ಟೈಲ್

ಇದು ಮುದ್ದು ಮುಖದ ‘ಮುತ್ತಿ’ನ ಕಥೆ..!

Published

on

ಜನ ಮರಳೋ ಜಾತ್ರೆ ಮರುಳೋ ಎಂಬಂತೆ ರಂಗಿನ ಫ್ಯಾಷನ್ ಲೋಕದಲ್ಲಿ ದಿನಕ್ಕೊಂದರಂತೆ ಹೊಸ ಟ್ರೆಂಡ್ ಸೃಷ್ಟಿ ಆಗುತ್ತದೆ. ಚಿತ್ರ ವಿಚಿತ್ರ ಫಂಕೀ ಫ್ಯಾಷನ್ , ಯುವಪೀಳಿಗೆಯಲ್ಲಿ ಭಾರೀ ಕ್ರೇಜ್ ಹುಟ್ಟುಹಾಕಿದೆ. ಸೋಷಿಯಲ್ ಮೀಡಿಯಾ ದ ಪ್ರಭಾವ ಫ್ಯಾಷನ್ ದುನಿಯಾದಲ್ಲೂ ಕಾಣತೊಡಗಿದೆ.

ಇತ್ತೀಚೆಗಂತೂ, ಸೊಷಿಯಲ್ ಮೀಡಿಯಾಗಳು ಫ್ಯಾಷನ್ ಪ್ರಿಯರ ಆರಾಧ್ಯ ದೈವ ಎನಿಸತೋಡಗಿದೆ. ಇಂನ್ಟಾಗ್ರಾಂ , ಟ್ಟಿಟ್ಟರ್,ಫೇಸ್ಬುಕ್ ಗಳಲ್ಲಿ , ಯುವಪೀಳಿಗೆಯ ಸೆಳೆಯುವ ಫ್ಯಾಶನ್ ಕಥೆಯಾಗುತ್ತಿದೆ. ಕೇವಲ ಯುವ ಪೀಳಿಗೆ ಅಷ್ಟೇ ಅಲ್ಲದೆ, ಆಧುನಿಕ ಮಹಿಳೆಯರ ಅಭಿರುಚಿಗೆ ತಕ್ಕಂತೆ ನೂತನ ಶೈಲಿಯ ಫ್ಯಾಷನ್ ಟ್ರೆಂಡ್ ಸೃಷ್ಟಿಸಲಾಗುತ್ತಿದೆ.

ಕಚೇರಿಗೆ ತೆರಳುವ ಮಹಿಳೆಯರಿಂದ, ಕಿಟ್ಟಿ ಪಾರ್ಟಿ ಗಳಲ್ಲಿ ಮಿಂಚುವ ಫ್ಯಾಷನಿಸ್ತಾಗಳೂ  ‌‌ ಸೇರಿದಂತೆ, ಕಾಲೇಜು ಕ್ಯಾಂಪಸ್ಗಳಲ್ಲಿ ಈ ಟ್ರೆಂಡ್  ವೈರಲ್ ಆಗಿದೆ.

ಫೇಸ್ ಜಿವಲೆರೀ

ಹೆಣ್ಣು ಆಭರಣಪ್ರಿಯೆ. ಇಂದಿನ ಆಧುನಿಕ ಯುಗದಲ್ಲಿ, ಚಿತ್ರ ವಿಚಿತ್ರ ಆಭರಣಗಳು ಗರಿಗೆದರಿ ನಿಂತಿದೆ.  ಹಲ್ಲಿಗೂ ಆಭರಣ ಬಂದಿರುವ  ಆಧುನಿಕ ಫ್ಯಾಷನ್ ಯುಗದಲ್ಲಿ , ಮುಖದ ಶೃಂಗಾರಕ್ಕೂ ಫೇಸ್ ಜಿವಲೆರಿ ಶುರುವಾಗಿದೆ. ಅಂದಹಾಗೆ ಈಜಿಪ್ಟಿನ ರಾನಿಯರು  ಈ ಹಿಂದೆ ಮುಖಕ್ಕೂ ಆಭರಣ ಧರಿಸುತ್ತಿದ್ದರು ಎಂಬ ಉಲ್ಲೇಖವಿರುವ ಬೆನ್ನಲ್ಲೇ, ಇಂಸ್ಟಾಗ್ರಾಂ ಫ್ಯಾಷನ್ ಲೋಕದಲ್ಲಿ, ಫೇಸ್ ಜಿವಲೆರಿ ಶುರುವಾಗಿದೆ.

ಮುತ್ತಿನ ಸ್ಟಿಕರ್ ಗಳನ್ನ ಆಕರ್ಷಕವಾಗಿ ಮುಖದ ಮೇಲೆ ಚದುರಿದಂತೆ ಅಥವಾ ಚಿತ್ತಾರವಾಗಿ ಅಂಟಿಸಿಕೊಳ್ಳಲ್ಲಾಗುತ್ತಿದೆ. ಸದ್ಯ ಸೋಷಿಯಲ್ ಮೀಡಿಯಾ ದಲ್ಲಿ ಅಪ್ಲೋಡ್ ಮಾಡಲಾಗುತ್ತಿರುವ ಸೆಲ್ಫಿ ಗಳಲ್ಲಿ ಬಹುತೇಕ ಸೆಲಿಬ್ರಿಟಿಗಳು ಈ ಮುತ್ತಿನ ಮತ್ತಲ್ಲಿ ತೇಲುತ್ತಿದ್ದಾರೆ.

ಚಿತ್ರಶ್ರೀ ಹರ್ಷ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version