ದಿನದ ಸುದ್ದಿ
ಹರಿಹರ ತಾಲ್ಲೂಕಿಲ್ಲಿ ತಂಬಾಕು ಕಾಯ್ದೆ ಉಲ್ಲಂಘನೆಗೆ ದಂಡ
ಸುದ್ದಿದಿನ,ದಾವಣಗೆರೆ : ಹರಿಹರ ತಾಲ್ಲೂಕು ಅಬಕಾರಿ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಬಾರ್ ಅಂಡ್ ರೆಸ್ಟೋರೆಂಟ್‍ಗಳು ಧೂಮಪಾನ ಮುಕ್ತ ಮಾಡುವ ನಿಟ್ಟಿನಲ್ಲಿ ಸೋಮವಾರ ತಂಬಾಕು ನಿಯಂತ್ರಣ ಕೋಶ ವತಿಯಿಂದ ತಂಬಾಕು ಉತ್ಪನ್ನ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ಕಾಯ್ದೆ ಉಲ್ಲಂಘನೆಯ 29 ಪ್ರಕರಣಗಳನ್ನು ದಾಖಲಿಸಿ, ಒಟ್ಟು 9300 ರೂ. ದಂಡ ವಸೂಲಿಯಾಗಿದೆ.
ದಾಳಿಯಲ್ಲಿ ತಹಶೀಲ್ದಾರ ಕೆ.ಬಿ ರಾಮಚಂದ್ರಪ್ಪ, ಹರಿಹರ ವಲಯ ಅಬಕಾರಿ ನಿರೀಕ್ಷಕರಾದ ಶೀಲಾ ಜೆ ಕೆ, ತಾಲ್ಲೂಕು ಆರೋಗ್ಯಧಿಕಾರಿ ಡಾ. ಚಂದ್ರಮೋಹನ್, ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಸಮಾಜ ಕಾರ್ಯಕರ್ತ ದೇವರಾಜ್ ಕೆ.ಪಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಯಾದ ಉಮ್ಮಣ್ಣ ಎಂ, ಬಿಎಚ್‍ಇಒ ನಾಗರಾಜ್ ಟಿ, ಅಬಕಾರಿ ಉಪ ನಿರೀಕ್ಷಕರಾದ ಡಿ.ಎಸ್ ನಾಯ್ಕ್, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಯಾದ ದಾದಾಪೀರ್, ಸಹಾಯಕ ಕೃಷ್ಣ ಹಾಗೂ ಇತರರು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243