ದಿನದ ಸುದ್ದಿ
ನಾಯಿಮಾಂಸಕ್ಕಾಗಿ ಮುಗಿಬಿದ್ದ ಜನ ; ಕಾರಣವೇನು ಗೊತ್ತಾ..?
ಸುದ್ದಿದಿನ ಡೆಸ್ಕ್ | ಉತ್ತರ ಕೊರಿಯಾದಲ್ಲಿ ಜನರು ನಾಯಿಗಳ ಮಾಂಸಕ್ಕೆ ಮುಗಿದಿದ್ದಾರೆ. ಕಾರಣ ಏನು ಅಂತ ತಿಳಿದರೆ ನೀವು ಅಚ್ಚರಿ ಪಡುತ್ತೀರಿ.
ಉತ್ತರಕೊರಿಯಾದಲ್ಲಿನ ಕ್ಯಾಲೆಂಡರ್ ನಂತೆ ಬೇಸಿಗೆಯ ಮೂರುದಿನ ಅಂದರೆ ಜುಲೈ 17, 27 ಮತ್ತು ಆಗಸ್ಟ್ ತಿಂಗಳ 27 ರ ದಿನ ಅಲ್ಲಿನ ಉಷ್ಣಾಂಶ ತುಂಬಾ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಉಷ್ಣಾಂಶ 40 ಡಿಗ್ರಿಗಿಂತಲೂ ಅಧಿಕವಾಗಿರುತ್ತದೆ.
ಈ ಕಾರಣಕ್ಕೆ ಬೇಸಿಗೆಯ ಬಿರುಬಿಸಿಲನ್ನು ಸಮತೋಲನಗೊಳಿಸುವುದಕ್ಕೋಸ್ಕರ ಅಲ್ಲಿನ ಜನರು ನಾಯಿಯ ಮಾಂಸವನ್ನು ಸೇವಿಸುತ್ತಾರೆ. ನಾಯಿಮಾಂಸ ಸೇವಿಸಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಎಂಬ ನಂಬಿಕೆ ಈ ಜನರಲ್ಲಿದೆ. ಅಲ್ಲಿನ ಜನರು ಈ ಬೇಸಗೆಯ ದಿನವನ್ನು ‘ಡಾಗ್ ಡೇಸ್ ಆಫ್ ಸಮ್ಮರ್’ ಎಂದು ಕರೆಯುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401