ದಿನದ ಸುದ್ದಿ
ಸಿನೆಮಾ ನಿರ್ಮಾಪಕರಾಗುವಂತೆ ನಂಬಿಸಿ ಮೋಸ
ಸುದ್ದಿದಿನ ಡೆಸ್ಕ್ | ಕೆ.ಆರ್ .ಪುರ, ತಮಿಳು ಚಿತ್ರ ಪೈ ಮಸಾಜ್ ಮತ್ತು ನಾನಾ ಅವಲ್ ನಲ್ ಮಜೈ ಚಿತ್ರಗಳಿಗೆ ನಿರ್ಮಾಪಕರಾಗುವಂತೆ ನಂಬಿಸಿ ಮೊಸ ಮೋಸಮಾಡಿರುವ ವೇಲ್ ಮುರಗನ್. ಮಣಿ ವಸಕನ್. ಪದ್ಮ ನಾಭನ್. ಪಾರ್ಥಿಭನ್ ಎಂಬುವವರ ವಿರುದ್ಧ ವಂಚನೆ ದೂರು ದಾಖಲಾಗಿದೆ.
ಒಂದು ಕೋಟಿ ವೆಚ್ಚದಲ್ಲಿ ಚಿತ್ರಗಳ ನಿರ್ಮಾಣಕ್ಕೆ ಯೋಜನೆ ಹಾಕಿದ್ದು, ಅವರುಗೆ 25 ಲಕ್ಷ ಹಣ ಕೊಟ್ಟ ಹೆಚ್ ಎಎಲ್ ಬಳಿಯ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ವಾಸಿ ಮನೋಹರ್ ಮೋಸ ಹೋಗಿದ್ದಾರೆ. ಮೋಸ ಹೋಗಿರುವ ಮನೋಹರ್ ಹೆಚ್ ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401