ದಿನದ ಸುದ್ದಿ
ಜುಲೈ 5 ರ ಬಳಿಕ ಮಾಲ್ ತೆರೆಯಲುಗೆ ಅನುಮತಿ : ಸಿಎಂ ಯಡಿಯೂರಪ್ಪ
ಸುದ್ದಿದಿನ, ಬೆಂಗಳೂರು: ಲಾಕ್ಡೌನ್ ನಿಂದ ಪ್ರತೀ ಮಾಲ್ ಗಳಿಗೆ 2 – 3 ಕೋಟಿ ನಷ್ಟವಾಗಿದ್ದು, ಜುಲೈ 5 ರ ಬಳಿಕ ಮಾಲ್ ತೆರಯಲು ಅನುಮತಿ ನೀಡುವ ಸಾಧ್ಯತೆ ಇದೆ.
ಸಿಎಂ ಭೇಟಿ ಬಳಿಕ ಮಾತನಾಡಿದ ಗರುಡಾ ಮಾಲ್ ಸಿಇಒ ನಂದೀಶ್, ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಕೋವಿಡ್ ನಿಯಮಗಳನ್ನು ಪಾಲನೆ ಮಾಡಲು ಬದ್ಧರಿದ್ದೇವೆ. ಇದರ ಜತೆಗೆ ಮಾಲ್ ಗಳ ಬಾಡಿಗೆ, ವಿದ್ಯುತ್ ಫಿಕ್ಸೆಡ್ ಚಾರ್ಜ್ ಮನ್ನಾ ಮಾಡಲು ಕೋರಿದ್ದೇವೆ.
ಇದನ್ನೂ ಓದಿ | ರಮೇಶ್ ಜಾರಕಿಹೊಳಿ ದೇವೇಂದ್ರ ಫಡ್ನವಿಸ್ ಭೇಟಿ ತಪ್ಪಿಲ್ಲ : ಸಚಿವ ಮಾಧುಸ್ವಾಮಿ
ರಾಜ್ಯದಲ್ಲಿ ಒಟ್ಟು 84 ಮಾಲ್ ಗಳಿವೆ. ಮೂರು ಕೋಟಿ ನಷ್ಟವಾಗಿದೆ. ಮೂರು ಲಕ್ಷ ಸಿಬ್ಬಂದಿ ಗೆ ಉದ್ಯೋಗವಿಲ್ಲದೇ ಕಷ್ಟ ಆಗಿದೆ. ಹೀಗಾಗಿ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ
ಜುಲೈ 5 ರಿಂದ ಮಾಲ್ ತೆರೆಯಲು ಅನುಮತಿ ಕೋರಿದ್ದೇವೆ. ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243