ದಿನದ ಸುದ್ದಿ
ಬ್ರೇಕಿಂಗ್: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ
ನವದೆಹಲಿ (ಪಿಟಿಐ): ಹದಿನೈದು ದಿನಗಳೊಳಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗುತ್ತಿವೆ. ಮುಂಬೈಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‍ಗೆ 85.93 ರೂಪಾಯಿ ಮತ್ತು ಡೀಸೆಲ್‍ಗೆ 74.54 ರೂಪಾಯಿಗೆ ಏರಿಕೆಯಾಗಿದೆ. ಜಾಗತಿಕ ದರದಲ್ಲಿ ಬದಲಾವಣೆ ಆಗಿರುವುದರಿಂದ ಇಂಧನ ಬೆಲೆ ಹೆಚ್ಚಿದೆ, ಇದು ಶೀಘ್ರದಲೇ ಕುಸಿಯಲಿದೆ ಎಂದು ಸರ್ಕಾರ ಭರವಸೆ ನೀಡಿದೆ.
ಪೆಟ್ರೋಲ್ ದರವನ್ನು ಬುಧವಾರ ಲೀಟರ್ ಗೆ 13 ಪೈಸೆಯಷ್ಟು ಮತ್ತು ಡೀಸೆಲ್ ಗೆ 14 ಪೈಸೆ ಏರಿಸಲಾಗಿತ್ತು. ಮೆಟ್ರೋ ನಗರಗಳ ಪೈಕಿ ದೆಹಲಿಯಲ್ಲಿ ಇಂದನ ಬೆಲೆ ಕಡಿಮೆ ಇರುತ್ತದೆ. ಈಗ ದೆಹಲಿಯಲ್ಲಿ ಲೀಟರ್ ಪೆಟ್ರೋಲ್‍ಗೆ 78.18 ರೂ. ಇದೆ. ಡೀಸೆಲ್‍ಗೆ 69.75 ರೂಪಾಯಿ ಇದೆ.
Read also: ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿದ ರಶ್ಮಿಕಾ ಮಂದಣ್ಣ
“ತೈಲ ದರದಲ್ಲಿ ಈ ಏರಿಕೆ ನಿಜವಾಗಿಯೂ ತಾತ್ಕಾಲಿಕವಾಗಿದೆ ಎಂದು ಭರವಸೆ ನೀಡುತ್ತೇನೆ” ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 70 ಡಾಲರ್ ಇತ್ತು. ಈಗ ಅದು 74-75 ಡಾಲರ್ಗೆ ಹೆಚ್ಚಿದೆ. ಇದು ಉತ್ಪಾದನೆಯಲ್ಲಿ ಕಡಿಮೆಯಾಗಿರುವ ಕಾರಣಕ್ಕೆ ಬೆಲೆ ಹೆಚ್ಚಾಗಲು ಕಾರವಾಗಿದೆ. ಶೀಘ್ರದಲ್ಲೇ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 70-71 ಡಾಲರ್ಗೆ ಮರಳಲಿದೆ ಎಂದು ತಿಳಿಸಿದ್ದಾರೆ.