ದಿನದ ಸುದ್ದಿ
ನವಜೋಡಿಗೆ 5 ಲೀಟರ್ ಪೆಟ್ರೋಲ್ ಉಡುಗೊರೆ
ಸುದ್ದಿದಿನ ಡೆಸ್ಕ್: ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದ ಮದುವೆಯಲ್ಲಿ ವರನ ಸ್ನೇಹಿತರು 5ಲೀಟರ್ ಪೆಟ್ರೋಲ್‍ಅನ್ನು ಉಡುಗೊರೆಯಾಗಿ ನೀಡಿದ್ದು, ಏರುತ್ತಿರುವ ಪೆಟ್ರೋಲ್ ದರದ ಅಣಕ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ಮದುವೆ ಸಂಭ್ರಮದಲ್ಲಿದ್ದ ವಧು ವರರಿಗೆ ಸ್ನೇಹಿತರ ಗುಂಪೊಂದು ಐದು ಲೀಟರ್ ಪೆಟ್ರೋಲ್ ನೀಡಿದ ಕೆಲವು ಸೆಕೆಂಡ್‍ಗಳ ದೃಶ್ಯವನ್ನು ತಮಿಳುನಾಡಿನ ಪುದಿನ ತಲೈಮುರೈ ಎಂಬ ವಾಹಿನಿಯು ಪ್ರಸಾರ ಮಾಡಿದೆ.
ಪೆಟ್ರೋಲ್ ಕ್ಯಾನ್ ಸ್ವೀಕರಿಸಿದ ಹುಡುಗ ನಗುತ್ತಿರುವ 39 ಸೆಕೆಂಡ್‍ಗಳ ವಿಡಿಯೊ ಸಾಮಾಜಿಕ ಜಾಲತಾಣಳಲ್ಲಿ ವೈರಲ್ ಆಗಿದೆ.
ತಮಿಳುನಾಡಿನಲ್ಲಿ ಪೆಟ್ರೋಲ್ ದರವು 85.15 ರೂ.ಗೆ ಏರಿಕೆಯಾಗಿದ್ದು, ಇದು ರಾಜ್ಯದ ಇತಿಹಾಸದಲ್ಲೇ ಮೊದಲು. ಹಾಗಾಗಿ ಇದು ಗಿಫ್ಟ್ ಕೊಡಲು ಯೋಗ್ಯ ವಸ್ತು ಎಂದು ನಾವು ಯೋಚಿಸಿದೆವು ಎಂದು ಉಡುಗೊರೆ ಕೊಟ್ಟ ಸ್ನೇಹಿತರು ವಾಹಿನಿಗೆ ತಿಳಿಸಿದ್ದಾರೆ.