ದಿನದ ಸುದ್ದಿ

ಪೆಟ್ರೋಲ್ ಬೆಲೆ ಇಳಿಕೆ ; ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿ : ಸಚಿವೆ ನಿರ್ಮಲಾ ಸೀತಾರಾಮನ್

Published

on

ಸುದ್ದಿದಿನ ಡೆಸ್ಕ್ : ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ 8 ರೂಪಾಯಿ ಹಾಗೂ ಡೀಸಲ್ ಮೇಲೆ 6 ರೂಪಾಯಿ ಕೇಂದ್ರ ಅಬಕಾರಿ ಸುಂಕ ಕಡಿತಗೊಳಿಸಿರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಇದರಿಂದ ಪೆಟ್ರೋಲ್ ಬೆಲೆ 9 ರೂಪಾಯಿ 50 ಪೈಸೆ ಹಾಗೂ ಡೀಸಲ್ ದರ ಪ್ರತಿ ಲೀಟರ್‌ಗೆ 7 ರೂಪಾಯಿ ಕಡಿಮೆಯಾಗಲಿದೆ. ಈ ತೀರ್ಮಾನದಿಂದ ಪ್ರತಿವರ್ಷ ಸರ್ಕಾರಕ್ಕೆ 1ಲಕ್ಷ ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಅಡುಗೆ ಅನಿಲ ಸಿಲಿಂಡರ್ ಪಡೆದಿರುವ ಕುಟುಂಬಗಳಿಗೆ ವಾರ್ಷಿಕ 12ಸಿಲಿಂಡರ್‌ಗಳ ಮಿತಿ ನಿಗದಿ ಪಡಿಸಿದ್ದು, ಪ್ರತಿ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿ ನೀಡಲು ತೀರ್ಮಾನಿಸಲಾಗಿದೆ ಇದರಿಂದ ಸರ್ಕಾರಕ್ಕೆ ಪ್ರತಿವರ್ಷ 6 ಸಾವಿರದ 100ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಹೇಳಿದ್ದಾರೆ. ಕಬ್ಬಿಣ, ಉಕ್ಕು, ಪ್ಲಾಸ್ಟಿಕ್ ಉತ್ಪನ್ನಗಳಿಗೆ ಕಸ್ಟಂ ಸುಂಕವನ್ನು ಸಹ ತಗ್ಗಿಸಲಾಗಿದ್ದು, ಸಿಮೆಂಟ್ ಲಭ್ಯತೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version