ದಿನದ ಸುದ್ದಿ
ದಿವಾಕರ. ಡಿ ಮಂಡ್ಯ ಅವರಿಗೆ ಪಿ ಎಚ್ ಡಿ ಪದವಿ
ಸುದ್ದಿದಿನ,ಮಂಡ್ಯ:ಜಿಲ್ಲೆಯ ಮದ್ದೂರು ತಾಲೂಕಿನ ಕೊತ್ತನಹಳ್ಳಿ ಗ್ರಾಮದ ಶ್ರೀ.ದಾಸಯ್ಯ ಜಿ ಟಿ ಮತ್ತು ಶ್ರೀಮತಿ ನಿಂಗಮ್ಮ ಇವರ ಪುತ್ರರಾದ ದಿವಾಕರ.ಡಿ ಅವರು ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಮಂಡಿಸಿದ್ದ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಪಿ ಎಚ್ ಡಿ ಪದವಿ ನೀಡಿದೆ.
ಇವರು ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಎನ್. ರಂಗಸ್ವಾಮಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ “ ಆ್ಯನ್ ಇಂಪ್ಯಾಕ್ಟ್ ಆಫ್ ಮಹಾತ್ಮ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯ್‍ಮೆಂಟ್ ಗ್ಯಾರಂಟಿ ಆಕ್ಟ್ ಆನ್ ಎಂಪ್ಲಾಯ್‍ಮೆಂಟ್ ಜನರೇಷನ್ ಇನ್ ಕರ್ನಾಟಕ : ಎ ಕೇಸ್ ಸ್ಟಡಿ ಆಫ್ ಮಂಡ್ಯ ಡಿಸ್ಟ್ರಿಕ್ಟ್” ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ಫವಿದ್ಯಾಲಯವು ಪಿ ಎಚ್ ಡಿ ಪದವಿ ಪ್ರಧಾನ ಮಾಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243