ದಿನದ ಸುದ್ದಿ
ಪುಷ್ಪಲತ ಅವರಿಗೆ ಪಿಎಚ್ ಡಿ ಪದವಿ
ಸುದ್ದಿದಿನ, ಶಿವಮೊಗ್ಗ : ಭದ್ರಾವತಿ ಹೊಸನಂಜಾಪುರ ಗ್ರಾಮದ ಪುಷ್ಪಲತ. ಸಿ ಅವರಿಗೆ ‘ವಿಜಯಾದಬ್ಬೆಯವರ ಸಾಹಿತ್ಯದಲ್ಲಿ ಸ್ತ್ರೀವಾದದ ತಾತ್ವಿಕ ನಿಲುವುಗಳು’ ಎಂಬ ವಿಷಯದ ಮೇಲೆ 2019 ಮೇ ತಿಂಗಳಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್ ಡಿ ಪದವಿ ನೀಡಿದೆ.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಹಾ.ಮ.ನಾಗಾರ್ಜುನ ಅವರು ಮಾರ್ಗದರ್ಶನ ನೀಡಿದ್ದರು. ಇದು ಪುಷ್ಪಲತ.ಸಿ ಅವರು ಕನ್ನಡ ಭಾರತಿಗೆ ಪಿ ಹೆಚ್ ಡಿಗೆ ಸಲ್ಲಿಸಿದ ಮಹಾಪ್ರಬಂಧವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243