ಲೈಫ್ ಸ್ಟೈಲ್
ಪಿಂಕ್ ರೇನ್ ಬೋ, ಇದು ಅಪ್ಪಟ ಸತ್ಯ..!
ಜೂನ್ 24ರ ಸೋಮವಾರ ಈ ದಕ್ಷಿಣ ಮತ್ತು ಪಶ್ಚಿಮ ಇಂಗ್ಲೆಂಡ್ ನಾ ಜನರಿಗೆ ಒಂದು ಅಚ್ಚರಿ ಕಾದಿತ್ತು. ಆಗಸದ ಕೆಂಪು, ನೀಲಿ, ಬಣ್ಣದ ಚೆಲ್ಲಾಟಕ್ಕೆ ಸಾಕ್ಷಿ ಆಯಿತು “ಪಿಂಕ್ ರೇನ್ ಬೋ”. ಪಿಂಕ್ ರೇನ್ ಬೋ!ಅಂತ ಹುಬ್ಬೇರಿಸಬೇಡಿ. ಇದು ಯಾವುದೇ ಟೋ ಶಾಪ್ ಮಾಡಿದ ದೃಶ್ಯಗಳಲ್ಲ. ಪ್ರಕೃತಿ ಯು ಈ ರಮಣೀಯ ರಂಗಿನೋಕುಳಿಯನ್ನ ಇಂಗ್ಲೆಂಡ್ ನಾ ಜನರು ಕಣ್ಣು ತುಂಬಿಕೊಂಡರು. ಸಂಜೆಯ ನೀಲಿ- ಕೆಂಪು ಆಗಸದಲ್ಲಿ ಮಳೆಯ ನಂತರ ಮೂಡಿದ ಕಾಮನಬಿಲ್ಲಿನ ಚರ್ಚೆ ವಿಶ್ವದಾದ್ಯಂತ ನಡೆಯುತ್ತಿದೆ. ಕಾರಣ ಇಷ್ಟೇ, ಏಳು ಬಣ್ಣಗಳ ಕಾಮನಬಿಲ್ಲಿನ ಬದಲು ಕೇವಲ ಪಿಂಕ್ ಬಣ್ಣದ ಕಾಮನಬಿಲ್ಲು ಮೂಡಿದ್ದೇ ಚರ್ಚೆ ಗೆ ಆಹಾರವಾಗಿದೆ.
ವಿಜ್ಞಾನಿಗಳ ಪ್ರಕಾರ, ಕಳೆದೆರಡು ದಿನಗಳಿಂದ ಇಂಗ್ಲೆಂಡ್ ನಾ ಸೂರ್ಯಾಸ್ತ, ಕೆಂಪು ಆಗಸವ ಸೃಷ್ಟಿಸಿದ್ದು, ಕಾಮನಬಿಲ್ಲಿನ ಉಳಿದೆಲ್ಲ ಬಣ್ಣಗಳು ಆಗಸದ ಘಾಡ ನೇರಳೆ ಬಣ್ಣದಿ ಹುದುಗಿ ಹೋಗಿದೆ. ವಿಜ್ಞಾನ ಏನೇ ಇರಲಿ, ಫೋಟೋ ಕ್ಲಿಕ್ಕಿಸುವವರಿಗಂತೂ ರಸದೌತಣ ಉಣಬಡಿಸಿದೆ ಈ ಪಿಂಕ್ ರೇನ್ ಬೋ..!
–ಚಿತ್ರಶ್ರೀ ಹರ್ಷ
ಸುದ್ದಿದಿನ.ಕಾಂ|ವಾಟ್ಸಾಪ್|9980346243