ದಿನದ ಸುದ್ದಿ

ಚನ್ನಗಿರಿ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ‌ ‘ವಿಶ್ವ ಪರಿಸರ ದಿನಾಚರಣೆ’

Published

on

ಸುದ್ದಿದಿನ, ಚನ್ನಗಿರಿ : ವಿಶ್ಬ ಪರಿಸರ ದಿನದ ಅಂಗವಾಗಿ ಎನ್ ಎಸ್ ಎಸ್ ಘಟಕ1-2  ವತಿಯಿಂದ ಇಂದು ಶ್ರೀ ಶಿವಲಿಂಗೇಶ್ವರ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಹೊಂಗೆ, ಬಾದಾಮಿ, ಮಾವು, ಬೇವು ಸೇರಿದಂತೆ ನೂರುತರಹದ ಸಸಿ ನೆಡುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಹಾಲಸಿದ್ದಪ್ಪ, ಐಕ್ಯೂಎಸಿ ಅಬ್ದುಲ್ ರೆಹಮಾನ್ ಪ್ರೊ. ಮಹಮೂದ್ ಖಾನ್, ಸಹಾಯಕ ಪ್ರಾಧ್ಯಾಪಕ ಡಾ.ರವಿ, ಡಾ. ಅಮೃತೇಶ್ವರ, ಎನ್ ಎಸ್ ಎಸ್ ಸಂಯೋಜಕರಾದ ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ, ಎಸ್  ಪ್ರೊ.ಗೌರಮ್ಮ, ಹಾಗೂ ಡಾ.ಹರೀಶ್, ಸಹಾಯಕ ಪ್ರಾಧ್ಯಾಪಕ ಡಾ.ಶಿವಣ್ಣ, ಡಾ.ಪ್ರಕಾಶ್, ವಲಯ ಅರಣ್ಯಾಧಿಕಾರಿ ಸತೀಶ್ ಮತ್ತು ಸಿಬ್ಬಂದಿ, ಚನ್ನಗಿರಿ ಎ ಎಸ್ ಐ ರವಿ ಗ್ರಂಥಪಾಲಕ ಮಲ್ಲಿಕಾರ್ಜುನ ಸೇರಿದಂತೆ, ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version