ದಿನದ ಸುದ್ದಿ

ಪ್ಲೆಕ್ಸ್ ತೆರವು ವಿಚಾರ | ಬಿಬಿಎಂಪಿ ಹಾಗೂ ಪೊಲೀಸರಿಗೆ ಮತ್ತೆ ಹೈಕೋರ್ಟ್ ಚಾಟಿ

Published

on

ಸುದ್ದಿದಿನ ಡೆಸ್ಕ್ | ಬಿಬಿಎಂಪಿ ಮತ್ತು ಪೊಲೀಸ್ರಿಗೆ ಮತ್ತೆ ಹೈ ಕೋರ್ಟ್ ಚಾಟಿ ಬೀಸಿದೆ. ಫ್ಲೆಕ್ಸ್ ತೆರವು ವಿಚಾರ ಮತ್ತೆ ಗರಂ ಆದ ನ್ಯಾಯಪೀಠ. ಎಷ್ಟೇ ಕಾಲಾವಕಾಶ ಕೊಟ್ಟರೂ ಯಾಕೆ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ. ಈಗಲೂ ಕೆಲವೆಡೆ ಫ್ಲೆಕ್ಸ್ ಇರುವ ಮಾಹಿತಿ ಬರುತ್ತಿದೆ. ಬೀಟ್ ಪೊಲೀಸರು,ಆಯುಕ್ತರು ಏನ್ ಮಾಡ್ತಿದ್ದಾರೆ ಎಂದು ಗರಂ ಆಗಿದೆ.

ಫ್ಲೆಕ್ಸ್ ಇರುವವರೆಗೆ ನಿಮಗೆ ರಿಲ್ಯಾಕ್ಸ್ ಇರಲ್ಲ.
ಬಿಬಿಎಂಪಿ ಹಾಗೂ ಪೊಲೀಸ್ ಆಯುಕ್ತರಿಗೆ ಎಚ್ಚರಿಕೆ ನೀಡಿದೆ ಹೈಕೋರ್ಟ್.ನಗರದಲ್ಲಿ ಫ್ಲೆಕ್ಸ್ ತೆರವು ಸಂಬಂಧ ಪಿಐಎಲ್ ಅರ್ಜಿ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್ ವಿಭಾಗೀಯ ಪೀಠ. ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದಿನೆಶ್ ಮಹೇಶ್ವರಿ ಹಾಗೂ ದೇವದಾಸ್ ಇದ್ದ ವಿಭಾಗೀಯ ಪೀಠ.

ಜಾಹಿರಾತು ತೆರವು ನೋಟೀಸ್ ಗೆ 1192 ಆಕ್ಷೇಪಣೆ ಬಂದಿದೆ. ಆಗಸ್ಟ್ 27 ರ ಒಳಗೆ ಆಕ್ಷೇಪಣೆ ಪರಿಶೀಲನೆ ಅಂತ್ಯ ಗೊಳಿಸಲಾಗುತ್ತೆ. ಅ.31 ಒಳಗೆ ಜಾಹಿರಾತು ನೀತಿ ರೂಪಿಸಲಾಗುತ್ತೆ ಬಿಬಿಎಂಪಿ ಪರ ವಕೀಲ ಶ್ರೀನಿಧಿ ವಾದ ಮಂಡಿಸಿದ್ದರು. ಈ ಹಿಂದೆ ರಾಜ್ಯ ವ್ಯಾಪಿ ಜಾಹಿರಾತು ನೀತಿ ರೂಪಿಸಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ ಹೈಕೋರ್ಟ್.
ಪದೇ ಪದೇ ಫ್ಲೆಕ್ಸ್ ಹಾಕುವವರ ಅಂಕಿ ಅಂಶ ಸಂಗ್ರಹಿಸಿ,ಈ ರೀತಿ ಕೃತ್ಯ ಮಾಡುವವರ ವಿರುದ್ಧ ದಂಡ ವಿಧಿಸಿ ಪಾರಾಗಬಾರದು.ನೀವು ಸಾರ್ವಜನಿಕರ ಮನವಿಯನ್ನೂ ವರ್ಚವಾದರೂ ಗಮನಿಸುವುದಿಲ್ಲ. ಇದಿರಂದಲೇ ಶೇ 40 ರಷ್ಟು ಕೇಸುಗಳು ಇದೇ ವಿಚಾರಕ್ಕೆ ದಾಖಲಾಗುತ್ತಿದೆ. ಸರ್ಕಾರ 7 ರಿಂದ 15 ದಿನಗಳೊಳಗೆ ಮನವಿ ಇತ್ಯರ್ಥಪಡಿಸಬೇಕು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಜೆ ಸಲಹೆ. ಪೊಲೀಸ್ ಆಯುಕ್ತರು ಹಾಗೂ ಬಿಬಿಎಂಪಿ ಇಬ್ಬರೂ ಇದರ ಕಡೆ ಗಂಭೀರ ಗಮನಹರಿಸಬೇಕು. ಅರ್ಜಿ ವಿಚಾರಣೆಯನ್ನುಆಗಸ್ಟ್ 31 ಕ್ಕೆ ಮುಂದೂಡಿದ ಹೈಕೋರ್ಟ್.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version