ದಿನದ ಸುದ್ದಿ
ಭಾರತ-ಪಾಕ್ ಸಮಸ್ಯೆಯನ್ನು ನಾವೇ ಪರಿಹರಿಸಿಕೊಳ್ಳುತ್ತೇವೆ : ಟ್ರಂಪ್ ಗೆ ಮೋದಿ ಪ್ರತಿಕ್ರಿಯೆ
ಸುದ್ದಿದಿನ,ಬೈರಿಟ್ಜ್: ಭಾರತ ಮತ್ತು ಪಾಕಿಸ್ತಾನ 1947ಕ್ಕೂ ಮೊದಲಿನಿಂದ ಒಟ್ಟಿಗೆ ಇವೆ ಮತ್ತು ನಾವು ಒಟ್ಟಿಗೆ ನಮ್ಮ ಸಮಸ್ಯೆಗಳನ್ನು ಕುರಿತು ಚರ್ಚಿಸುತ್ತೇವೆ, ಪರಿಹರಿಸಿಕೊಳ್ಳು ತ್ತೇವೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಜಿ7-ಶೃಂಗಮೇಳದಲ್ಲಿ ಭಾಗಿಯಾಗಲು ಫ್ರಾನ್ಸ್ ಪ್ರವಾಸದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ಆಡಿದ ವೇಳೆ ಪ್ರತಿಕ್ರಿಯಿಸಿದ ಅವರು, ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಎಲ್ಲ ಸಮಸ್ಯೆಗಳು ದ್ವಿಪಕ್ಷೀಯ ಸ್ವಭಾವದಲ್ಲಿವೆ. ಆದ್ದರಿಂದ ಈ ವಿಷಯದಲ್ಲಿ ಇದರಲ್ಲಿ ಯಾವುದೇ ದೇಶದ ಮಧ್ಯಸ್ಥಿಕೆ ಕುರಿತು ನಾವು ತಲೆ ಚಿಂತಿಸುವುದಿಲ್ಲ ಎಂದು ಅವರು ಹೇಳಿದರು. ಈ ಮೂಲಕ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆಗೆ ಸಿದ್ಧ ಎಂದು ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಕುರಿತು ಭಾರತಕ್ಕೆ ಸಹಮತ ಇಲ್ಲ ಎಂಬ ಸಂಗತಿಯನ್ನು ಅವರು ಮನದಟ್ಟುಮಾಡಿಕೊಟ್ಟಂತಾಗಿದೆ.
ಕೃಪೆ : ಡೆಮಾಕ್ರಟಿಕ್ ನ್ಯೂಸ್
ಸುದ್ದಿದಿನ.ಕಾಂ|ವಾಟ್ಸಾಪ್|9980346243