ರಾಜಕೀಯ
ಟ್ರೋಲ್ ಆಯ್ತು ಮೋದಿ ಐಐಟಿ ಭಾಷಣ !
ಸುದ್ದಿದಿನ ಡೆಸ್ಕ್: ವಿಶ್ವ ಜೈವಿಕ ಇಂಧನ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಐಐಟಿಯಲ್ಲಿ ಮಾಡಿದ ಭಾಷಣವು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದೆ.
ಪ್ರಧಾನಿ ಅವರನ್ನು ವಿಶ್ವದ ದೊಡ್ಡ ವಿಜ್ಞಾನಿ ಎಂದು ಕಾಲೆಳೆದು ಮಾಡಿರುವ ವಿಡಿಯೊ ಫೇಸ್ಬುಕ್, ಇನ್ಸ್ ಡಾ ಗ್ರಾಂ ಮೊದಲಾದ ತಾಣಗಳಲ್ಲಿ ಹರಿದಾಡುತ್ತಿದೆ.
ವಿಡಿಯೊದಲ್ಲಿರುವ ಮೋದಿ ಭಾಷಣ ಮೂರ್ಖತನದ ಪರಮಾವಧಿ ಎಂದು ಟೀಕಿಸಲಾಗಿದೆ.
‘ನಾನು ಟೀ ಮಾರುವ ಜಾಗದ ಪಕ್ಕದಲ್ಲಿ ಒಂದು ದೊಡ್ಡ ಮೋರಿ ಇತ್ತು. ಪ್ರತಿದಿನ ಒಬ್ಬ ವ್ಯಕ್ತಿ ಬಂದು ಮೋರಿಯೊಳಗೆ ಪೈಪ್ ಹಾಕಿ ಅದನ್ನು ನೇರವಾಗಿ ತನ್ನ ಸ್ಟೌಗೆ ಸಿಕ್ಕಿಸಿಕೊಂಡು ಅದರಲ್ಲೇ ಟೀ ಮಾಡುತ್ತಿದ್ದ. ಅದೇ ದಿನ ಸಂಜೆ ಒಂದು ಟ್ರಾಕ್ಟರ್ ಟ್ಯೂಬ್ ಅನ್ನು ಗಾಡಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದ. ಇದರೊಳಗೆ ಏನಿದೆ ಎಂದು ಕೇಳಿದೆ. ಆತ ತಾನು ಮೋರಿಯಲ್ಲಿನ ಗ್ಯಾಸ್ ಅನ್ನು ಟ್ಯೂಬ್ ನೊಳಗೆ ತುಂಬಿಕೊಂಡು ಹೋಗುತ್ತಿರುವುದಾಗಿ ಹೇಳಿದ. ಅದರಲ್ಲಿ ಮನೆಯಲ್ಲಿ ಅಡಿಗೆ ಮಾಡುವುದಾಗಿ ಹೇಳಿದ’ ಎಂದು ಭಾಷಣದಲ್ಲಿ ಹೇಳಿದರು. ಇದು ಟ್ರೋಲ್ ಗೆ ಗುರಿಯಾಗಿದೆ.