ದಿನದ ಸುದ್ದಿ

ಶೂದ್ರೋದ್ಧಾರದ ಆದ್ಯಕವಿ ಹರಿಹರ : ಡಾ. ಅರವಿಂದ ಮಾಲಗತ್ತಿ

Published

on

ಸುದ್ದಿದಿನ ದಾವಣಗೆರೆ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಮತ್ತೆ ಕಲ್ಯಾಣ ಎಂಬ ಕಾರ್ಯಕ್ರಮದಲ್ಲಿ ಇಂದು ಡಾಕ್ಟರ್ ಅರವಿಂದ ಮಾಲಗತ್ತಿ ಅವರು “ಹರಿಹರನ ದಲಿತಪ್ರಜ್ಞೆ” ಎಂಬ ವಿಷಯವನ್ನು ಆಧರಿಸಿ ಉಪನ್ಯಾಸ ನೀಡಿದರು.

ಹರಿಹರ ಒಬ್ಬ ಜನಮಾನಸದ ಕವಿ, ಜನಮುದಾಯದ ದೇಶಿಯ ಶಕ್ತ ಸ್ವಾಭಿಮಾನದ ಕವಿಯಾಗಿ ತನ್ನ ರಗಳಿಗೆ ಮಾರ್ಗವನ್ನು ತೋರಿಸಿದವ, ದೊರೆಯ ಚರಿತ್ರೆಯನ್ನು ಭವಿಯ ಚರಿತ್ರೆ ಎಂದ ಹರಿಹರನು
ಶಿವಭಕ್ತರನ್ನು ತಲೆ ಮೇಲೆ ಹೊತ್ತು ಮೆರೆಯುವ ಈತನ ಕೀರ್ತಿ ಅಸಾಮಾನ್ಯವಾದು ಎಂದರು.

ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯ ವ್ಯಕ್ತಿಯನ್ನಾಗಿ ಅಸಾಮಾನ್ಯ ನನ್ನು ಸಾಮಾನ್ಯ ವ್ಯಕ್ತಿಯಾಗಿ ಚಿತ್ರಿಸುವ ಈತನ ರಗಳೆಗಳಲ್ಲಿ ಶಿವಭಕ್ತರ ಕಥೆಗಳನ್ನು ಹೇಳುವ ಸಂದರ್ಭದಲ್ಲಿ ಹೆಚ್ಚು ತಳಸಮುದಾಯದ ವಿಷಯಗಳಿಗೆ ಒತ್ತುನೀಡಿ ತಾನೆ. ಇವನ ಕಥಾ ನಾಯಕರೆಲ್ಲರೂ ತಳಸಮುದಾಯದವರು,

ವ್ಯಕ್ತಿ ಮತ್ತು ಶಿವಭಕ್ತಿ ಎಂಬುದು ಅಭೇದ್ಯ ವಲ್ಲ ಎನ್ನುವುದನ್ನು ಹರಿಹರನು ತನ್ನ ರಗಳೆಗಳು ನಿರೂಪಿಸುತ್ತಾನೆ. ಕನ್ನಡ ಸಾಹಿತ್ಯ ಚರಿತ್ರೆಯ ಹಿನ್ನೆಲೆಯಲ್ಲಿ ನೋಡುವುದಾದರೆ ಹರಿಹರನನ್ನು “ಶೂದ್ರೊದ್ಧಾರದ ಆದ್ಯ ಕವಿ”ಯಾಗಿ ನಿಸ್ಸಂದೇಹವಾಗಿ ಕರೆಯಬಹುದು ಎಂದುರು.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಈತನನ್ನು ಉಪೇಕ್ಷಿಸಿರುವುದಕ್ಕೆ ಪ್ರಾಯಶಹ ಈತನನ್ನು ಮತ ಮುಖಿಯಾಗಿ ಕಂಡಿರುವ ಸಾಧ್ಯತೆ ಇದೆ,
ಸೈದ್ಧಾಂತಿಕ ಕವಿಯಾದ ಈತನಿಗೆ ಚರಿತ್ರೆ ಮುಖ್ಯವಾಗುವುದಕ್ಕಿಂತ ಸಮಾಜದ ಶುದ್ಧೀಕರಣವು ಮುಖ್ಯವೆಂಬ ನೆಲೆಯಲ್ಲಿ ಈತನ ರಗಳೆಗಳು ಧ್ವನಿಸುತ್ತವೆ. ಬಹುತೇಕ ತನ್ನ ರಗಳೆಗಳನ್ನು ಶರಣರ ಪವಾಡದ ಪರಿಭಾಷೆಯಲ್ಲಿ ಪ್ರತಿಪಾದಿಸುತ್ತಾನೆ.

ರಾಜಕೀಯ ವ್ಯವಸ್ಥೆ ಎದುರು ನಿಲ್ಲುವ ಗಟ್ಟಿತನ ಇಲ್ಲಿಯ ಪಾತ್ರಗಳಿಗಿದ್ದು ಸಾಹಿತ್ಯ ಚರಿತ್ರೆಯಲ್ಲಿ ತಳಸಮುದಾಯದ ಮತ್ತು ರಾಜಕೀಯ ವ್ಯವಸ್ಥೆಯ ಕುರಿತ ದನಿಯಾಗಿ ಹರಿಹರನ ರಗಳೆಗಳು ಪ್ರತಿನಿಧಿಸುತ್ತವೆ ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್| 8073105526-9980346243

Trending

Exit mobile version