ದಿನದ ಸುದ್ದಿ
ಹೆಡ್‍ಕಾನ್ಸ್ಟೇಬಲ್ ಹುದ್ದೆಗೆ ‘ಸ್ಪೋಟ್ರ್ಸ್’ ಕೋಟಾದಡಿ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ : ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್(ಸಿಐಎಸ್‍ಎಫ್)ನಲ್ಲಿ 300 ಹೆಡ್‍ಕಾನ್ಸ್‍ಟೇಬಲ್(ಜನರಲ್ ಡ್ಯೂಟಿ) ಹುದ್ದೆಗಳಿಗೆ ಅರ್ಹ ಪುರುಷ/ಮಹಿಳೆಯರಿಂದ ಸ್ಪೋಟ್ರ್ಸ್ ಕೋಟಾದಡಿ ಅರ್ಜಿ ಆಹ್ವಾನಿಸಲಾಗಿದೆ.
ಪಿ.ಯು.ಸಿ ಯಾವುದೇ ವಿಷಯದಲ್ಲಿ ತೇರ್ಗಡೆಯಾದ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕ್ರೀಡೆ ಅಥವಾ ಅಥ್ಲೆಟಿಕ್ಸ್‍ನ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದು. ಕನಿಷ್ಠ 18 ರಿಂದ ಗರಿಷ್ಠ 23 ವರ್ಷ (02-08-1996 ರಿಂದ 01-08-2001 ರ ಒಳಗೆ ಜನಿಸಿರಬೇಕು) ವಯೋಮಾನ, ಪ. ಜಾತಿ/ ಪ. ಪಂಗಡದವರಿಗೆ 5 ವರ್ಷ ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅರ್ಹ ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ವೆಬ್‍ಸೈಟ್ https://cisfrectt.in
ನಲ್ಲಿ ಅರ್ಜಿಗಳನ್ನು ಡೌನ್‍ಲೋಡ್ ಮಾಡಿಕೊಂಡು, ಭರ್ತಿಮಾಡಿದ ಅರ್ಜಿಗಳನ್ನು ಡಿ.17 ವೆಬ್‍ಸೈಟ್‍ನಲ್ಲಿ ತಿಳಿಸಿದ ವಿಳಾಸಕ್ಕೆ ಕಳುಹಿಸಿಕೊಡಬೇಕು.
ಹೆಚ್ಚಿನ ಮಾಹಿತಿಗಾಗಿ
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ದಾವಣಗೆರೆ, ದೂರವಾಣಿ ಸಂಖ್ಯೆ: 08192-259446 ಇಲ್ಲಿಗೆ ಸಂಪರ್ಕಿಸಬಹುದೆಂದು ಉದ್ಯೋಗಾಧಿಕಾರಿ ರವೀಂದ್ರ.ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243