ದಿನದ ಸುದ್ದಿ
ಲಂಚ ಸ್ವೀಕರಿಸುತ್ತಿದ್ದ ಪೊಲೀಸ್ ಪೇದೆ ; ಎ ಸಿ ಬಿ ಬಲೆಗೆ
ಸುದ್ದಿದಿನ ಡೆಸ್ಕ್ | ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲುಕಿನ ದಿಬ್ಬೂರಳ್ಳಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಚಂದ್ರಶೇಖರ್ ಎಂಬಾತ 40 ಸಾವಿರ ಲಂಚ ಸ್ವೀಕರಿಸುವ ವೇಳೆ ಎ.ಸಿ.ಬಿ ಬಲೆಗೆ ಬಿದ್ದಿದ್ದಾನೆ.
ಸ್ಟೋನ್ ಕ್ರಷರ್ ಓನರ್ ಬಳಿ ಲಂಚ ಸ್ವೀಕರಿಸುವೆ ವೇಳೆ ಎ.ಸಿ.ಬಿ ಬಲೆಗೆ ಆತ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದಾನೆ. (ತಿಂಗಳ ಮಾಮುಲಿ ) ಪ್ರತಿ ತಿಂಗಳು ಮಾಮೂಲಿ ನೀಡುವಂತೆ ಬೆದರಿಕೆ ಹಾಕುತ್ತಿದ್ದುದರಿಂದ ಬೇಸತ್ತ ಕ್ರಷರ್ ಮಾಲಿಕ ಜಯರಾಮ್ ಯಿಂದ ಎ.ಸಿ.ಬಿ ಗೆ ದೂರು ನೀಡಿದ್ದರು.ಇಂದು ಹಣ ವಸೂಲಿಗೆ ಬಂದಾಗ ಎ.ಸಿ.ಬಿ ಬಲೆಗೆ ಬಿದ್ದಿದ್ದಾನೆ.