ದಿನದ ಸುದ್ದಿ
ಸರಗಳ್ಳರಿದ್ದಾರೆ ಜೋಕೆ ಎಂಬ ಹಾಡು ವೈರಲ್ : ಸೊಗಸಾಗಿ ಹಾಡಿದೆ ಪೊಲೀಸ್ ಪೇದೆಗೆ ಸಿಕ್ತು ಬಹುಮಾನ !
ಸುದ್ದಿದಿನ ಡೆಸ್ಕ್: ಸದ್ಯ ಮಹಾ ನಗರಿ ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ಈ ಹಾವಳಿ ತಡೆಗೆ ಪೊಲೀಸ್ ಇಲಾಖೆ ಇಷ್ಟೇ ಕ್ರಮ ಕೈಗೊಂಡರು ಕಳ್ಳರು ತಮ್ಮ ಕೈ ಚಳಕ ತೋರಿಸುವುದು ಬಿಟ್ಟಿಲ್ಲ. ಈ ಕಾರಣಕ್ಕೆ ನಾಗರಿಕರು ಕೂಡ ಜಾಗೃತಿ ವಹಿಸುವುದು ಮುಖ್ಯ ಎನ್ನುತ್ತೆ ಪೊಲೀಸ್ ಇಲಾಖೆ.
ಇನ್ನು ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸರಗಳ್ಳತದ ಬಗ್ಗೆ ಪೊಲೀಸ್ ಪೇದೆ ಸುಬ್ರಮಣ್ಯ ಶಾನುಭೋಗ್ ಎಂಬುವರು ಜಾಗೃತಿ ಗೀತೆ ರಚಿಸಿ ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಬಹುತೇಕ ನೆಟ್ಟಿಗರು ಸುಬ್ರಮಣ್ಯ ಅವರ ಧ್ವನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಜೋಕೆ ಜೋಕೆ ಸರಗಳ್ಳರಿದ್ದಾರೆ ಜೋಕೆ’ ಎಂಬ ಹಾಡನ್ನು ಎಲ್ಲರು ಗುನುವಂತೆ ಹಾಡಿದ್ದಾರೆ. ಇದನ್ನು ಗುರುತಿಸಿದ ಬೆಂಗಳೂರು ಸಿಟಿ ಪೊಲೀಸ್ ಇಲಾಖೆ ಸುಬ್ರಮಣ್ಯ ಅವರಿಗೆ ಹತ್ತು ಸಾವಿರ ರೂಪಾಯಿ ಬಹುಮಾನ ನೀಡಿ ಪ್ರೋತ್ಸಾಹಿಸಿದೆ.
ಈ ಕುರಿತು ಬೆಂಗಳೂರು ಪೊಲೀಸ್ ಇಲಾಖೆ ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಿದೆ. ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರು ಸುಬ್ರಮಣ್ಯ ಅವರಿಗೆ ಹತ್ತು ಸಾವಿರ ಬಹುಮಾನ ನೀಡಿ ಪ್ರೋತ್ಸಾಹಿಸಿದ್ದಾರೆ.
ಈಗ ನೀವು ಒಂದು ಸಲ ವಿಡಿಯೋ ನೋಡಿ, ಪೊಲೀಸ್ ಪೇದೆ ಸುಬ್ರಮಣ್ಯ ಅವರನ್ನು ಪ್ರೋತ್ಸಾಹಿಸಿ
Police Constable subramanya shanbhog spreading awareness on chain snatching through his song.