ದಿನದ ಸುದ್ದಿ
ರೌಡಿಗಳ ಜತೆ ಪೊಲೀಸರ ಶಾಮೀಲು : ಬೀದಿಗೆ ಬಂದ ಕುಟುಂಬ
ಸುದ್ದಿದಿನ ಡೆಸ್ಕ್ : ಬೆಂಗಳೂರಲ್ಲಿ ಪೊಲೀಸರ ಜೊತೆ ಗೂಂಡಾಗಳು ಶಾಮೀಲು ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ತಿ ಕಬಳಿಸಲು ಅಪರಾಧಿ ರವಿ ಎಂಬಾತನಿಗೆ ಕೆ. ಆರ್. ಪುರಂ ಪಿಎಸ್ ಐ ಮಂಜುನಾಥ್ ಸಾಥ್ ನೀಡಿದ ಆರೋಪ ಕೇಳಿಬಂದಿದೆ.
ಏನಿದು ಪ್ರಕರಣ..?
ರಾದಾಕ್ರಷ್ಣ ಮತ್ತು ಪ್ರಭಾ ಎಂಬ ದಂಪತಿಯ ಆಸ್ತಿ ಕಬಳಿಸಲು ಪೊಲೀಸರ ಸಾಥ್ ನೀಡಿ್್ದ್ದುದ್ದು,
ಪೊಲೀಸರ ಗೂಂಡಾಗಳ ವರ್ತನೆಗೆ ಬೆದರಿ ಜಾಗ ಖಾಲಿ ಮಾಡಿದ್ದಾರೆ. ಹಳೇ ಆಪರಾಧಿಗಳ ಜೊತೆ ಪೊಲೀಸರು ಒಡಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ ಯಾಗಿದ್ದು, ಗನ್ ಇಟ್ಟು ಬೆದರಿಸಿದ್ದಾಗಿ ಪಿ ಎ ಎಸ್ ಐ ಮಂಜುನಾಥ್ ಮೇಲೆ ಆರೋಪ ವ್ಯಕ್ತವಾಗಿದೆ. ಈ ಘಟನೆಯು ಕೆ ಆರ್ ಪುರಂನ ಸೀಗೆಹಳ್ಳಿ ಬಳಿ ನಡೆದಿದ್ದು, ಪೊಲೀಸ್ ಆಯುಕ್ತರಿಗೆ ದೂರು ನೀಡಲು ಬಂದಿದ್ದಾರೆ ದಂಪತಿಗಳು.
ದಂಪತಿಯ ಎದುರೇ ಪೊಲೀಸರಿಗೆ ಹಣ ಕೊಟ್ಟಿದ್ದ ಅಪರಾಧಿ ರವಿ, ಬಾಗಿಲು ಒಡೆದು ಈ ದಂಪತಿಯ ಮನೆಗೆ ಹಾನಿಮಾಡಿ ಪೊಲೀಸರಿಗೆ ಹೇಳಿ ನಿಮ್ಮನ್ನು ಶೂಟ್ ಮಾಡಿಸುವುದಾಗಿ ಬೆದರಿಕೆ ಹಾಕಿದ್ದ.ನಂತರ ಪೊಲೀಸ್ ಮತ್ತು ಹಳೆ ಅಪರಾಧಿ ರವಿಯ ಕಾಟಕ್ಕೆ ತನ್ನ ಮನೆ ಬಿಟ್ಟು ಪರಾರಿಯಾದ ದಂಪತಿಗಳು ನಿನ್ನೆಯಿಂದ ರಸ್ತೆಯಲ್ಲೆ ವಾಸಮಾಡುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401