ದಿನದ ಸುದ್ದಿ
ರೌಡಿಗಳ ಮೇಲೆ ಪೊಲೀಸ್ ಫೈರಿಂಗ್ : ಬೆಂಗಳೂರಲ್ಲಿ ಕೊಲೆ ಆರೋಪಿಗಳ ಬಂಧನ
ಸುದ್ದಿದಿನ ಡೆಸ್ಕ್ : ಬೆಂಗಳೂರಿನಲ್ಲಿ ಯಲಂಹಂಕ ಪೊಲೀಸರಿಂದ ಕೊಲೆ ಆರೋಪಿಗಳ ಮೇಲೆ ಶೂಟ್‌ಔಟ್ ನಡೆದಿದೆ. ಆರೋಪಿಗಳನ್ನ ಹಿಡಿಯಲು ಮುಂದಾದ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಆರೋಪಿಗಳಾದ ಮನೋಜ್ ಅಲಿಯಾಸ್ ಕೆಂಚ ಮತ್ತು ಮಂಜೆಗೌಡ ಮೇಲೆ ಫೈರಿಂಗ್ ಮಾಡಲಾಗಿದೆ.
ಚಿಕ್ಕಜಾಲ ಕೊಲೆ ಕೇಸ್ ಒಂದರ ಆರೋಪಿಗಳನ್ನ ಬಂಧಿಸಲು ಮುಂದಾದ ವಿದ್ಯಾರಣ್ಯಪುರ ಪೊಲೀಸರು ಹಾರಿಸಿದ ಗುಂಡು ಮನೋಜ್ ಅಲಿಯಾಸ್ ಕೆಂಚನ ಕಾಲಿಗೆ ತಗುಲಿದೆ.
ಹಿನ್ನೆಲೆ-ಘಟನೆ
ಅರುಣ್ ಅಳ್ಳಾಲಸಂದ್ರದ ಯುವ ಕಾಂಗ್ರೆಸ್ ಅಧ್ಯಕ್ಷನನ್ನು ರಾತ್ರಿ ಸಿನಿಮಾ ನೋಡಿ ವಾಪಸ್ ಬರುವಾಗ ಹಲ್ಲೆ ಮಾಡಿ ಕೊಲೆ ಮಾಡಿದ್ದರು ಈ ದುಷ್ಕರ್ಮಿಗಳು. ಮಾರಾಕಾಸ್ತ್ರಗಳಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ ದುಷ್ಕರ್ಮಿಗಳು.
ಮನೋಜ್ ಅಲಿಯಾಸ್ ಕೆಂಚ, ಮಂಜೇಗೌಡ ನನ್ನು ಬಂಧಿಸಲು ಹೋದಾಗ ಘಟನೆ ಪೊಲೀಸ್ರಿಂದ ತಪ್ಪಿಸಿಕೊಳ್ಳಲು ಮಾರಕಾಸ್ತ್ರದಿಂದ ಹಲ್ಲೆಗೆ ಮುಂದಾಗಿದ್ದ ಮನೋಜ್. ಅರುಣ್ ಕೊಲೆ ಆರೋಪಿ ಕೆಂಚ ಈಗಾಗಲೇ ಅನೇಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಕೊಲೆಯಾದ ಅರುಣ್, ಆರೋಪಿ ಕೆಂಚ ಗೆಳೆಯರಾಗಿದ್ದರು.
ಹಣಕಾಸಿನ ವ್ಯವಹಾರ ಮತ್ತು ಹಳೇದ್ವೇಷ ಹಿನ್ನಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗಿದೆ.
ಅರುಣ್ ಕೊಲೆ ಆರೋಪಿ ಕೆಂಚ ಈಗಾಗಲೇ ಅನೇಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಕೊಲೆಯಾದ ಅರುಣ್, ಆರೋಪಿ ಕೆಂಚ ಗೆಳೆಯರಾಗಿದ್ದರು. ಹಣಕಾಸಿನ ವ್ಯವಹಾರ ಮತ್ತು ಹಳೇದ್ವೇಷ ಹಿನ್ನಲೆಯಲ್ಲಿ ಕೊಲೆ ನಡೆದಿದೆ. ಇಬ್ಬರು ಆರೋಪಿಗಳಾದ ಕೆಂಚ ಮತ್ತು ಮಂಜೇಗೌಡನನ್ನು ಬಂಧಿಸುವ ವೇಳೆ ಶೂಟೌಟ್ ನಡೆದಿದೆ.
ಯಲಹಂಕ ಇನ್ಸ್ ಪೆಕ್ಟರ್ ಮಂಜುನಾಥ್ ಗೌಡ ಮತ್ತು ವಿದ್ಯಾರಣ್ಯಪುರ ಇನ್ಸ್ ಪೆಕ್ಟರ್ ರಾಮಮೂರ್ತಿ ತಂಡದಿಂದ ಶೂಟೌಟ್ ನಡೆದಿದೆ.
ಒಟ್ಟು ನಾಲ್ಕು ಜನ ಪೊಲೀಸ್ ಸಿಬ್ಬಂದಿ ಬಂಧನಕ್ಕೆ ತೆರಳಿದ್ದರು. ಯಲಹಂಕ ಪೊಲಿಸ್ ಪೇದೆ ಉದಯ್ ಕುಮಾರ್ ಗೆ ಕೆಂಚನಿಂದ ಬಿಯರ್ ಬಾಟಲಿನಿಂದ ಹೊಡೆದ ಪರಿಣಾಮ ಕೈಗೆ ಗಾಯವಾಗಿದೆ. ಹಾಗೇ ವಿದ್ಯಾರಣ್ಯಪುರ ಪೇದೆ ಮಹದೇವ ಮೂರ್ತಿಗ ಸಣ್ಣ ಗಾಯವಾಗಿದೆ.ಸದ್ಯ ಅರುಣ್ ಕೊಲೆ ಆರೋಪಿ ಕೆಂಚ ಮತ್ತು ಟೀಂ ಬಂಧನವಾಗಿದೆ. ಕೆಂಚನ ಬಂಧನವಾಗದಿದ್ದರೆ ಇನ್ನಷ್ಟು ಅಪರಾದ ಕೃತ್ಯ ನಡೆಯುವ ಸಾದ್ಯತೆ ಇತ್ತು ಎನ್ನುತ್ತಿವೆ ಪೊಲೀಸ್ ಮೂಲಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9986715401