/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

ಗಾಯಕ ಚಂದನ್ ಶೆಟ್ಟಿ ಗೆ ವಾರ್ನಿಂಗ್ ನೀಡಿದ ಪೊಲೀಸ್ !

Published

on

ಸುದ್ದಿದಿನ ಡೆಸ್ಕ್: ಬಿಗ್ ಬಾಸ್ ವಿನ್ನರ್, ಗಾಯಕ ಚಂದನ್ ಶೆಟ್ಟಿ ಹೆಸರು ಸದ್ಯ ಎಲ್ಲೆಡೆ ಹರಿದಾಡುತ್ತಿದೆ. ಗಾಂಜಾ ಕುರಿತು ಗಾಯಕ ಚಂದನ್ ಶೆಟ್ಟಿ ಹಾಡೊಂದನ್ನು ಹೇಳಿದ್ದು, ಇದು ಸಮಾಜಕ್ಕೆ ಕೆಟ್ಟ‌ ಸಂದೇಶ ಸಾರುತ್ತಿದೆ ಎಂದು ಸಿಸಿಬಿ ಪೊಲೀಸರಿಗೆ ದೂರು ಸಲ್ಲಿಸಲಾಗಿತ್ತು.

ಪ್ರಕರಣ ಗಂಭೀರವಾಗಿ ತೆಗೆದುಕೊಂಡ‌ ಸಿಸಿಬಿ ಪೊಲೀಸರು ಗಾಯಕ ಚಂದನ್ ಶೆಟ್ಟಿ ಗೆ ನೋಟಿಸ್ ಜಾರಿ ಮಾಡಿದ್ದರು. ಈ ವಿಷಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡಿತ್ತು.‌ ನಂತರ ಚಂದನ್ ಶೆಟ್ಟಿ‌ ಪ್ರಭಾವಿಯೊಬ್ಬರ ಮೂಲಕ ಸಿಸಿಬಿ ಪೊಲೀಸರಿಗೆ ಕಾಲಾವಕಾಶ ನೀಡುವಂತೆ ಒತ್ತಡ ತರುವ ಪ್ರಯತ್ನ ಮಾಡಿದ್ದರು. ಆದರೆ ಪೊಲೀಸರು ಬಂಧನ ಮಾಡುವ ಎಚ್ಚರಿಕೆ ನೀಡಿದ್ದಾಗ ಗಾಯಕ ಚಂದನ್ ಶೆಟ್ಟಿ ವಿಚಾರ ಖುದ್ದು ಹಾಜರಾಗಿದ್ದಾರೆ ಎನ್ನಲಾಗಿದೆ.

ಚಂದನ್ ಶೆಟ್ಟಿ ಗೆ ವಾರ್ನಿಂಗ್ ನೀಡಿದ ಪೊಲೀಸ್ !

ಮೂರು ವರ್ಷಗಳ ಹಿಂದೆ ನಿರ್ಮಾಣವಾದ ‘ಅಂತ್ಯ’‌ ಸಿನಿಮಾ ದಲ್ಲಿ ಗಾಯಕ ಚಂದನ್ ಶೆಟ್ಟಿ ಗಾಂಜಾ ಕ್ಕೆ ಸಂಬಂಧಿಸಿದ ಹಾಡು ಹೇಳಿದ್ದರು. ಇದರಲ್ಲಿ ಕೆಲವು ಸಾಲುಗಳು ಗಾಂಜಾ ಸೇವನೆಗೆ ಪ್ರಚೋದನೆ ನೀಡುವಂತೆ ಇವೆ ಎಂದು ದೂರಲಾಗಿತ್ತು.

ನಂತರ ಗಾಯಕ ಚಂದನ್ ಶೆಟ್ಟಿ ಸಿಸಿಬಿ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಡಿನಲ್ಲಿರುವ ದೃಶ್ಯಗಳ ಸಂಬಂಧ ಪ್ರಶ್ನಿಸಿದರು. ಇದ್ದ ವಿಷಯವನ್ನು ನೇರವಾಗಿ ಒಪ್ಪಿಕೊಂಡು ಮುಂದೆ ಹಾಗೆ ಮಾಡುವುದಿಲ್ಲ ಎಂದು ತಪ್ಪೊಪ್ಪಿಕೊಂಡೆ. ಇದು ಮೊದಲ ಸಲವಾದ್ದರಿಂದ ವಾರ್ನಿಂಗ್ ನೀಡಿ ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version