ದಿನದ ಸುದ್ದಿ
ಸಚಿವರ ಅಣ್ಣನ ಮಗನ ಮೇಲೆ ಪೊಲೀಸ್ ದರ್ಪ !
ಪಾಂಡವಪುರ: ಸಚಿವ ಸಿ.ಎಸ್.ಪುಟ್ಟರಾಜು ಅಣ್ಣನ ಮಗನ ಮೇಲೆ ಚಾಮರಾಜನಗರ ಪಿಎಸ್ ಐ ಯಿಂದ ಹಲ್ಲೆ. ಸಚಿವ ಪುಟ್ಟರಾಜು ಅಣ್ಣನ ಮಗ ಸಿ.ಹರೀಶ್ ಎಂಬುವರೆ ಮೇಲೆಯೇ ಪಿಎಸ್ ಐ ಶ್ರೀಧರ್ ಅವರಿಂದ ಹಲ್ಲೆ.
ಸಿಎಂ ಕುಮಾರಸ್ವಾಮಿ ಅವರು ವೇದಿಕೆಯಿಂದ ಕೆಳಗಿಳಿದು ಬರುವ ಸಂದರ್ಭದಲ್ಲಿ ಸಿಎಂಗೆ ಥ್ಯಾಂಕ್ಸ್ ಕೊಡಲು ಮುಂದಾದ ಸಾರ್ವಜನಿಕರನ್ನು ತಳುತ್ತಿದ್ದ ಪಿಎಸ್ ಐ ಶ್ರೀಧರ್ ಗೆ ಸ್ವಲ್ಪ ಇರಿಸಾರ್ ಎಂದು ಪ್ರಶ್ನಿಸಿದ ಸಿ.ಹರೀಶ್ ನಿಗೆ ಏಕವಚನದಲ್ಲಿ ಮಾತನಾಡಿದ ಬಳಿಕ ಇಬ್ಬರ ನಡುವೆ ಮಾತಿನಚಕಮಕಿ ನಡೆದು, ತಳ್ಳಾಟ ನೋಕಾಟವಾಗಿ ಬಳಿಕ ಪಿಎಸ್ ಐ ಶ್ರೀಧರ್ ಹರೀಶ್ ಮೇಲೆ ಹಲ್ಲೆ ನಡೆಸಿದರು. ಬಳಿಕ ಕಾರ್ಯಕರ್ತರು ಪಿಎಸ್ ಐ ವಿರುದ್ದ ತಿರುಗಿಬಿದ್ದ ತಕ್ಷಣ ಪಿಎಸ್ ಐ ಸುಮ್ಮನಾದರು.