ದಿನದ ಸುದ್ದಿ
ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ : ಲೋಗೋ ವಿನ್ಯಾಸಕ್ಕೆ ಹಣ ವ್ಯಯ
ಒಂದೆಡೆ ಯುವಕರು ಕೆಲಸವಿಲ್ಲದೆ ಕಂಗಾಲಾಗುತ್ತಿದ್ದಾರೆ. ಸಂಶೋಧಕರಿಗೆ ಸರ್ಕಾರ ನೀಡುವ ಫೆಲೋಷಿಪ್ ಗಳನ್ನೇ ಮುಂದುವರೆಸಿಕೊಂಡು ಹೋಗುತ್ತಾ ಉದ್ಯೋಗಕ್ಕಾಗಿ ಯುವಕರು ಹಪಹಪಿಸುತ್ತಿದ್ದಾರೆ.
ಹಿಂದಿನ ಸಿದ್ಧರಾಮಯ್ಯನವರ ಸರ್ಕಾರ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಲು ಬರೋಬ್ಬರಿ 5 ಕೋಟಿ ಹಣವನ್ನು ಬಿಡುಗಡೆಗೊಳಿಸಿತ್ತು. ಆದರೆ, ಇಲ್ಲಿಯವರೆವಿಗೂ ಬಿಡುಗಡೆಗೊಳಿಸಿದ ಹಣ ಇನ್ನೂ ಪ್ರತಿಷ್ಠಾನಕ್ಕೆ ಸಮರ್ಪಕವಾಗಿ ದಕ್ಕಿಲ್ಲ. ಈ ಸಂದರ್ಭದಲ್ಲಿ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರು,ಸದಸ್ಯರುಗಳು, ಸಹಾಯಕ ನಿರ್ದೇಶಕ ಕನ್ನಡ ಸಂಸ್ಕೃತಿ ಇಲಾಖೆ, ಚಿಕ್ಕಮಗಳೂರು ಇವರುಗಳು ಪ್ರತಿಷ್ಠಾನದ ಲೋಗೋ ಮಾಡಿಕೊಡಲು ಸೃಜನಶೀಲ ವಿನ್ಯಾಸಕರು, ಕಲಾವಿದರಿಗೆ ‘ ಲೋಗೋ ಸ್ಪರ್ಧೆ’ ಯನ್ನು ಏರ್ಪಡಿಸಿದ್ದಾರೆ.
ಹೀಗೆ ಸಾರ್ವಜನಿಕರ ಹಣವನ್ನು ಹರಾಜಿಗಿಡುವುದು ದುರದುಷ್ಟಕರ ಸಂಗತಿ.ಕನ್ನಡ ಸಂಸ್ಕೃತಿ ಇಲಾಖೆ ಯ ಬಳಿಯೇ ಹಲವಾರು ಜನ ಕಲಾವಿದರು, ಲೋಗೋ ವಿನ್ಯಾಸಕರನ್ನು ಸರ್ಕಾರ ಸಂಬಳ ನೀಡಿ ನೇಮಿಸಿಕೊಂಡಿದೆ. ಅವರ ಬಳಿ ಲೋಗೋವನ್ನು ನಿರ್ಮಿಸಿಕೊಳ್ಳಬಹುದಿತ್ತು. ಅದನ್ನು ಬಿಟ್ಟು ಪ್ರತಿಷ್ಠಾನ ಹೀಗೆ ತೇಜಸ್ವಿಯವರ ಹೆಸರಿನಲ್ಲಿ ಸರಿಯಾದ ಕಾರ್ಯಕ್ರಮಗಳನ್ನು ರೂಪಿಸಲಾಗದೆ. ಒಂದು ಸಣ್ಣ ಲೋಗೋ ನಿರ್ಮಿಸಲು ಪ್ರತಿಷ್ಠಾನದ ಹಣವನ್ನು ಹೀಗೆ ಸ್ಪರ್ಧೆಯ ನೆಪವೊಡ್ಡಿ ಹರಾಜಿಗಿಡುವುದು ಸರಿಯಲ್ಲ.
– ಕನ್ನಡಪ್ರೇಮಿ ಓಂಕಾರಸ್ವಾಮಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401