ಸಿನಿ ಸುದ್ದಿ
ದುನಿಯಾ ಸೂರಿ-ಟಗರು ಡಾಲಿಯ’ಪಾಪ್ ಕಾರ್ನ್ ಮಂಕಿ ಟೈಗರ್’ ಸಿನೆಮಾ ಮಹೂರ್ತ ಫಿಕ್ಸ್..!
ಸುದ್ದಿದಿನ, ಡೆಸ್ಕ್ : ಟಗರು ಸಿನೆಮಾ ಈ ವರ್ಷದ ಸೂಪರ್ ಹಿಟ್ ಸಿನೆಮಾ. ಸುಕ್ಕಾ ಸೂರಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನೆಮ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಹಾಗೆ ಹೊಸ ಪ್ರತಿಭೆಗಳನ್ನು ಈ ಸಿನೆಮಾ ಮೂಲಕ ಅನಾವರಣಗೊಳಿಸಿ ಜನಮಾನಸದಲ್ಲಿ ಉಳಿಯುವಂತೆ ಮಾಡಿದ ಕೀರ್ತಿ ಸೂರಿಗೆ ಅವರಿಗೆ ಸಲ್ಲುತ್ತದೆ.
ಈ ಸಿನೆಮಾದ ಡಾಲಿ ಪಾತ್ರಮಾಡಿದ್ದ ಧನಂಜಯ್ ಗೆ ರಾಮ್ ಗೋಪಾಲ್ ವರ್ಮಾರ ಕಂಪನಿಯ ಭೈರವ ಗೀತ ದಲ್ಲಿ ಅವಕಾಶ ಕಲ್ಪಿಸಿಕೊಡುವಂತೆಯೂ ಮಾಡಿದೆ. ಜತೆಗೆ ಸೂರಿ ಅವರ ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನೆಮಾದಲ್ಲೂ ಧನಂಜಯ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಸೆಪ್ಟೆಂಬರ್ 12 ಕ್ಕೆ ಈ ಸಿನೆಮಾದ ಮುಹೂರ್ತ ನಡೆಲಿದೆ. ಸೂರಿ ಅವರ ಮಗ ಈ ಸಿನೆಮಾಗೆ ಹೆಸರು ಕೊಟ್ಟಿರುವುದು ವಿಶೇಷ.
ಸುದ್ದಿದಿನ.ಕಾಂ|ವಾಟ್ಸಾಪ್|9986715401