ದಿನದ ಸುದ್ದಿ

ಆನೆ ಲದ್ದಿಯಿಂದ ಮಾಡಿದ ಪೋಸ್ಟಲ್ ಕವರ್‌ಗಳು ಬಿಡುಗಡೆ

Published

on

ಸುದ್ದಿದಿನ ಡೆಸ್ಕ್: ವಿಶ್ವ ಆನೆ ದಿನಾಚರಣೆ ಅಂಗವಾಗಿ ರಾಜ್ಯ ಸರಕಾರವು ಆನೆ ಲದ್ದಿಯಿಂದ ಮಾಡಲಾಗಿರುವ ವಿಶೇಷ ಪೋಸ್ಟಲ್ ಕವರ್‌ವೊಂದನ್ನು ಬಿಡುಗಡೆ ಮಾಡಿದೆ.
ರಾಜ್ಯ ಅರಣ್ಯ ಇಲಾಖೆಯ ಈ ಕಾರ‌್ಯದ ಬಗ್ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಈ ಪೋಸ್ಟಲ್ ಕವರ್‌ಅನ್ನು ಬಿಡುಗಡೆ ಮಾಡಿದರು.

ನಾಳೆಯಿಂದಲೇ ಈ ಕವರ್‌ಗಳು ರಾಜ್ಯದ ಅಂಚೆ ಕಚೇರಿಗಳಲ್ಲಿ ಲಭ್ಯವಾಗಲಿವೆ. ಅಂದಹಾಗೆ ಈ ಪೋಸ್ಟಲ್ ಕವರ್ ಅನ್ನು ಆನೆ ಲದ್ದಿಯಿಂದ ಮಾಡಲಾಗಿದೆ. ಆನೆ ಲದ್ದಿಯನ್ನು ಸಂಸ್ಕರಿಸಿ ಪೇಪರ್ ರೂಪ ನೀಡುವ ತಂತ್ರಜ್ಞಾನ ಬಹಳ ವಿರಳ. ರಾಜ್ಯ ಸರಕಾರ ಅದನ್ನು ಸದುಪಯೋಗ ಪಡಿಸಿಕೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *

Trending

Exit mobile version