ಲೈಫ್ ಸ್ಟೈಲ್
ಪೌಂಡ್ ವರ್ಕ್ ಔಟ್ ಎಕ್ಸ್ಪರ್ಟ್ : ನಿಹಾರಿಕಾ ಮ್ಯೂಸಿಕ್ ; ಮ್ಯಾಜಿಕ್..!
ಇದೋ ಬಂದಿದೆ ‘ಪೌಂಡ್’ ಫಿಟ್ನೆಸ್ ಫ್ರೀಕ್ ಗಳ ಹೊಸ ಕ್ರೇಜ್ ಎನ್ನುತ್ತಿದ್ದಾರೆ ಪೌಂಡ್ ಟ್ರೈನರ್ ನಿಹಾರಿಕ
ಸದಾ ಸ್ಲಿಮ್ ಮತ್ತು ಟ್ರಿಮ್ ಆಗಿ ಕಾಣಬೇಕು ಎಂಬುದು ಹೆಂಗುಳೆಯರ ಹಂಬಲ. ಬಳ್ಳಿಯಂತೆ ಬಳಕುವ ಮೈಮಾಟ ಯಾರಿಗೆ ತಾನೇ ಬೇಡ! ಅದಕ್ಕೆಂದೇ ಮಹಿಳೆಯರು ದುಬಾರಿಯಾದರೂ ಮೋಹಕವಾಗಿ ,ಕಾಣಬೇಕು ಎಂದು, ಫಿಟ್ನೆಸ್ ಸೆಂಟರ್ ಗಳ ಮೊರೆ ಹೋಗಿದ್ದಾರೆ.
ಜುಂಬಾ, ಯೋಗ, ಏರಿಯಲ್ ಯೋಗ, ಕಾರ್ಡಿಯೋ, ಜಿಮ್, ಅಂತೆಲ್ಲಾ ಫಿಟ್ ನೆಸ್ ಸೆಂಟರ್ ಗಳ ಮೊರೆ ಹೋಗುತಿತರುವ ಮಹಳಾಮಣಿಯರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ.
ಅಮೇರಿಕಾ ದಿಂದ ಭಾರತಕ್ಕೆ ಹಾರಿ ಬಂದಿದೆ ಪೌಂಡ್ ಫಿಟ್ ನೆಸ್ ವರ್ಕ್ ಔಟ್. ಮೂಲತಃ ಅಮೇರಿಕಾ ದವರಾದ ಕ್ರಿಸ್ಟೀನ್ ಮತ್ತು ಖ್ರಿಸಿಟೀನಾ ಎಂಬ ಇಬ್ಬರು ಮಹಿಳೆಯರ ಕೊಡುಗೆ ಈ ‘ಪೌಂಡ್’. ಡ್ರಂಮ್ಮಿಂಗ್(ಡೊಳ್ಳು) ಮುಖಾಂತರ ಇಡೀ ದೇಹಕ್ಕೆ ವ್ಯಾಯಾಮ ಮಾಡಲಾಗುತ್ತದೆ. HIGH INTENSITY INTERNAL TRAINING ಒಳಗೊಂಡಿರುವ ಪೌಂಡ್ ( POUND) ವರ್ಕಔಟ್ ಸದ್ಯ ಇಡೀ ವಿಶ್ವದಲ್ಲಿ ಜನಪ್ರಿಯ ಗೂಂಡಿದೆ. ಈಗಾಗಲೇ ಜಗತ್ತಿನ ಅದೆಷ್ಟೋ ಮಂದಿ ಈ ಪೌಂಡ್ ಮ್ಯಾಜಿಕ್ ಗೆ ಫುಲ್ ಫಿದಾ ಆಗಿದ್ದಾರೆ. ಡ್ರಂ ಕಡ್ಡಿಗಳನ್ನ ನೆಲದ ಮೇಲೆ ಬಾರಿಸುತ್ತಾ ಸಂಗೀತದೊಂದಿಗೆ ಬೆರೆತು ಬೆವರಿಳಿಸುವ ಬಗೆಯೇ ‘ಪೌಂಡ್. ದಿನಕ್ಕೆ 45 ನಿಮಿಷಗಳ ಪೌಂಡ್ ವರ್ಕ ಔಟ್ ಆರಾಮಾಗಿ ತಿಂಗಳಿಗೆ 2-3 kg ತೂಕ ಇಳಿಸುತ್ತದೆ. ಸುಮಾರು 800 calorie ಗಳನ್ನ ಸುಲಭವಾಗಿ ಕರಗಿಸುತ್ತದೆ. ತಿಂಗಳಲ್ಲಿ ‘5-6’ ಸುತ್ತ ಅಳತೆ ಇಳಿಸುತ್ತದೆಯಂತೆ.
ಸಂಗೀತ ದೊಂದಿಗೆ ಡ್ರಮ್ಮಿಂಗ್ ಮಾಡುತ್ತಾ ; ಸ್ಕ್ವಾಟ್, ಕ್ರಾಕ್ ಗಳ ಹೈ ಇಂಟೆಂಸಿಟೀ ವ್ಯಾಯಾಮ ಇದಾಗಿದೆ. ಸೊಂಟದ ಸುತ್ತಳತೆ, ಹಿಪ್ಸ್-ಥೈ ಗಳ ತೂಕ ಇಳಿಸಿಕೊಳ್ಳಲು ಉತ್ತಮ ವ್ಯಾಯಾಮವಂತೆ. ಚರ್ಮಕ್ಕೆ ಉತ್ತಮ ಟೋನಿಂಗ್ ನೀಡುತ್ತದೆ ಎನ್ನುತ್ತಾರೆ ಪೌಂಡ್ ಟ್ರೈನರ್ ಗಳು.
ಭಾರದಲ್ಲಿ ಪೌಂಡ್!
ಇತ್ತೀಚೆಗೆ ಭಾರತಲ್ಲೂ ಹೆಸರು ಮಾಡುತ್ತಿರುವ ‘ಪೌಂಡ್ ವರ್ಕ್ ಔಟ್’ ಗೋವಾ, ಮುಂಬೈ ಚೆನ್ನೈ, ಕೋಲ್ಕತಾದಲ್ಲಿ ಹೆಚ್ಚು ಗಮನ ಸೆಳೆದಿದೆ. ವಿದೇಶಿಯರೇ ಹೆಚ್ಚು ಇರುವ ಗೋವಾ ದಲ್ಲಿ ಇದು ತುಂಬಾ ಫೇಮಸ್. ಬೆಂಗಳೂರಿನಲ್ಲೂ ಶುರುವಾಗಿದೆ ‘ಪೌಂಡ್’ ಕ್ರೇಜ್!
ಏನನ್ನುತ್ತಾರೆ ಪೌಂಡ್ ಎಕ್ಸ್ಪರ್ಟ್
ಬೆಂಗಳೂರಿಗೆ ಪೌಂಡ್ ವರ್ಕ್ ಔಟ್ ಹೊಸತಾಗಿದ್ದು, ಬೆರಳಣಿಕೆ ಅಷ್ಟೇ ಟ್ರೈನರ್ ಗಳು ಲಭ್ಯವಿದ್ದಾರೆ. ಇನ್ನುಳಿದ ಫಿಟ್ ನೆಸ್ ವರ್ಕ್ ಔಟ್ ಗಿಂತಲೂ ವಿಭಿನ್ನವಾಗಿರುವ ‘ಪೌಂಡ್’ ಸಂಗೀತ ಮತ್ತು ವ್ಯಾಯಾಮ ಸಿಹಿ ಮಿಶ್ರಣವಾಗಿದೆ.
ಬೆಂಗಳೂರಿನ ಪೌಂಡ್ ವರ್ಕ್ ಔಟ್ ಎಕ್ಸ್ಪರ್ಟ್
ನಿಹಾರಿಕಾ( ನಿಕ್ಕಿ) ಬೆಂಗಳೂರಿನ ಪೌಂಡ್ ಟ್ರೈನರ್ ಹೀಗನ್ನುತ್ತಾರೆ… ಕಳೆದೆರಡು ವರ್ಷದ ಹಿಂದೆ, ಪ್ರಸವದ ನಂತರ ವಿಪರೀತ ದಡೂತಿ ಆಗಿದ್ದ ನಿಹಾರಿಕಾ. ಈಗ 83 kg ಇಂದ 60 kg ಗೆ ತೂಕ ಇಳಿಸಿಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ಪೌಂಡ್ ವರ್ಕ್ ಔಟ್ ಗೆ ತಮ್ಮನ್ನು
ಅರ್ಪಿಸಿಕೊಂಡಿರುವ ನಿಕ್ಕೀ ,ಬೆಂಗಳೂರಿನ ಕೆಲವೇ ಪೌಂಡ್ ಟ್ರೈನರ್ ಗಳಲ್ಲಿ ಒಬ್ಬರು. Gx ಸೆಂಟರ್ ನಲ್ಲಿ ಪೌಂಡ್ ಟ್ರೈನಿಂಗ್ ಮಗಿಸಿಕೊಂಡು, ಪೌಂಡ್ ಟ್ರೈನರ್ ಆಗಿ ಗುರುತಿಸಿ ಕೊಂಡಿದ್ದಾರೆ 35 ವರ್ಷದ ಈ ಫಿಟ್ ಹೆಣ್ಣು.
“ಪೌಂಡ್ ಕೇವಲ ಸಂಗೀತದೊಂದಿಗಿನ ವ್ಯಾಯಾಮ ವಲ್ಲಇಲ್ಲಿ ಸಂಗೀತವೇ ವ್ಯಾಯಾಮ ವಾಗಿಬಿಡುತ್ತದೆ” ಎನ್ನುತ್ತಾರೆ ನಿಹಾರಿಕಾ.
ಈ ಪೌಂಡ್ ವರ್ಕ್ ಔಟ್ ಈಗ ಕೆಲವೇ ಫಿಟ್ ನೆಸ್ ಸೆಂಟರ್ ಗಳಲ್ಲಿ ಲಭ್ಯವಿದ್ದು.. ಇದರ ಮಹತ್ವ ವನ್ನು ಜನರಿಗೆ ತಲುಪಿಸಸುವ ಆಸೆ ನಿಹಾರಿಕಾರದ್ದು.