ದಿನದ ಸುದ್ದಿ
ಹುತಾತ್ಮ ಕರ್ಕರೆ ವಿರುದ್ಧ ಹೇಳಿಕೆ : ಮಲೆಗಾಂವ್ ಸ್ಪೋಟದ ಆರೋಪಿ ಪ್ರಗ್ಯಾ ಸಿಂಗ್ ಕ್ಷಮೆಯಾಚನೆ
ಸುದ್ದಿದಿನ,ನವದೆಹಲಿ : ಮಲೆಗಾಂವ್ ಸ್ಪೋಟದ ಆರೋಪಿ ಪ್ರಗ್ಯಾ ಸಿಂಗ್ ಠಾಕೂರ್ 26/11 ರ ಹೀರೋ, ಹುತಾತ್ಮರಾದ ಅಧಿಕಾರಿ ಹೇಮಂತ್ ಕರ್ಕರೆ “ನಾನು ಕೊಟ್ಟ ಶಾಪದಿಂದ ಅವರು ಸತ್ತರು” ಎಂಬ ಕೀಳುಮಟ್ಟದ ಹೇಳಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ದೇಶದ ಜನತೆ ಹಾಗೂ ಐಪಿಎಸ್ ಅಧಿಕಾರಿಗಳು ಈಕೆಯ ಹೇಳಿಕೆಯ ವಿರುದ್ಧ ಶುಕ್ರವಾರ ಭಾರೀ ಆಕ್ರೋಶ ವ್ಯಕ್ತವಾದವು. ನಂತರ ಪ್ರಗ್ಯಾ ಸಿಂಗ್ ಠಾಕೂರ್ ತಾನು ನೀಡಿದ ಹೇಳಿಕೆ ತಪ್ಪಾಯಿತು ಎಂದು ಕ್ಷಮೆಯಾಚಿಸಿದ್ದಾರೆ.
“ದೇಹದಲ್ಲಿರುವ ಶತ್ರುಗಳಿಗೆ ನನ್ನ ಹೇಳಿಕೆಯಿಂದ ಲಾಭವಾಗುತ್ತದೆ. ಆದ್ದರಿಂದ ನಾನು ಈ ಹೇಳಿಕೆಯನ್ನು ವಾಪಾಸ್ ತೆಗೆದುಕೊಳ್ಳುತ್ತೇನೆ. ಹಾಗೇ ಕರ್ಕರೆಯವರು ಉಗ್ರರ ದಾಳಿಗೆ ಬಲಿಯಾಗಿ ಹುತಾತ್ಮರಾದರು” ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243