ದಿನದ ಸುದ್ದಿ

ಡಾ. ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ಅವರಿಗೆ ‘ಪ್ರಜಾಭೂಷಣ ಪ್ರಶಸ್ತಿ’

Published

on

ಸುದ್ದಿದಿನ ಡೆಸ್ಕ್ : ಕರುನಾಡ ಸೇವಾ ಟ್ರಸ್ಟ್, ಮಂಡ್ಯ ಇವರು ಕೊಡಮಾಡುವ “ರಾಜ್ಯಮಟ್ಟದ ಪ್ರಜಾಭೂಷಣ ಪ್ರಶಸ್ತಿ-2022”ರ ಪ್ರಶಸ್ತಿಯನ್ನು ಜು.03 ರಂದು ಮೈಸೂರಿನ ರೋಟರಿ ಸಂಭಾಂಗಣದಲ್ಲಿ ಅಯೋಜಿಸಲಾಗಿದ್ದ “ಸಾಧಕರ ಸಮಾಗಮ” ಸಮಾರಂಭದಲ್ಲಿ ಗಣ್ಯ ಮಹನೀಯರ ಮತ್ತು ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಸದಸ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ನವಿಲೇಹಾಳ್ ಗ್ರಾಮದ ಡಾ. ಷಕೀಬ್ ಎಸ್ ಕಣದ್ಮನೆ ಅವರ ಕನ್ನಡ ನಾಡು-ನುಡಿ, ನೆಲ-ಜಲ, ಸಮಾಜ ಸೇವೆ, ಸಂಶೋಧನೆ, ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ಇವರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಅಧ್ಯಕ್ಷರಾದ ಅಭಿನಂದನ್ ಎಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version