ದಿನದ ಸುದ್ದಿ

ರಾಮದಾಸ್ ಮನೆ ಮುಂದೆ ಪ್ರೇಮ ಕುಮಾರಿ ಆತ್ಮಹತ್ಯೆಗೆ ಯತ್ನ

ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ ಅವರ ಮನೆ ಮುಂದೆ ಪ್ರೇಮ ಕುಮಾರಿ ಅವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

Published

on

ಸುದ್ದಿದಿನ ಡೆಸ್ಕ್: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ ಅವರ ಮನೆ ಮುಂದೆ ಪ್ರೇಮ ಕುಮಾರಿ ಅವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಜಯನಗರದಲ್ಲಿರುವ ಶಾಸಕ ರಾಮದಾಸ್ ಅವರ ಮುಂದೆ ಬೆಳಗ್ಗೆ ಇಂದ ಕಾದು ಕುಳಿತಿದ್ದ ಪ್ರೇಮ ಕುಮಾರಿ ಅವರು, ಶಾಸಕರನ್ನು ಭೇಟಿ ಮಾಡಲು ಅವಕಾಶ ಕೇಳಿದಾಗ ಅವರ ಬೆಂಬಲಿಗರು ಬಿಡಲಿಲ್ಲ. ಇದರಿಂದ ಮನನೊಂದ ಪ್ರೇಮ ಕುಮಾರಿ ಅವರು ವೇಲ್‍ಅನ್ನು ಕುತ್ತಿಗೆಗೆ ಬಿಗಿದು ಕಂಬಕ್ಕೆ ನೇಣುಹಾಕಿಕೊಳ್ಳಲು ಯತ್ನಿಸಿದರು. ಅಲ್ಲದೇ ನೆಲದ ಮೇಲೆ ಬಿದ್ದು ಒದ್ದಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಪ್ರೇಮ ಕುಮಾರಿ ಅವರನ್ನು ಸುತ್ತುವರಿದು ಅವರಿಗೆ ನೀರು ಕುಡಿಸಿದರು.

ಸ್ಥಳಕ್ಕೆ ಬಂದ ಪೊಲೀಸರು ಪ್ರೇಮ ಕುಮಾರಿ ಅವರನ್ನು ಕರೆದೊಯ್ಯಲು ಯತ್ನಿಸಿದರು. ಆದರೆ ಅವರು ಜಗ್ಗಲಿಲ್ಲ. ನನ್ನ ಪಾಡಿಗೆ ನಾನು ಕುಳಿತಿದ್ದೇನೆ. ಒಮ್ಮೆ ರಾಮದಾಸ್ ಅವರನ್ನು ಭೇಟಿಯಾಗಲು ಅವಕಾಶ ಕೊಡಿ ಅಥವಾ ನನ್ನ ಹೆಣವನ್ನು ಇಲ್ಲಿಂದ ತೆಗೆದುಕೊಂಡು ಹೋಗಿ ಎಂದು ಅವರು ಗೋಳಾಡುತ್ತಿದ್ದರು.
ರಾಮದಾಸ್ ಅವರು ವಿಧಾನಸಭಾ ಚುನಾವಣೆಗೂ ಮುನ್ನ ನೀಡಿದ್ದ ಮಾತನ್ನು ಮರೆತಿದ್ದಾರೆ. ನನ್ನ ಸಂಕಷ್ಟವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದು ಅವರು ಪೊಲೀಸರನ್ನು ಅಂಗಲಾಚಿ ಬೇಡಿಕೊಂಡರು.

Leave a Reply

Your email address will not be published. Required fields are marked *

Trending

Exit mobile version