ಕ್ರೀಡೆ

ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಸದೃಢ ರಾಷ್ಟ್ರ ನಿರ್ಮಿಸಲು ಪ್ರೇರಣೆಯಾಗಲಿದೆ

Published

on

  • ಪ್ರತಿಭಾ ವಿ ಪೂಜಾರ,ಪ್ರಥಮ ವರ್ಷದ ಸ್ನಾತಕೋತ್ತರ ಪದವಿ, ವಿದ್ಯಾರ್ಥಿನಿ,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಬೆಂಗಳೂರು ವಿಶ್ವವಿದ್ಯಾಲಯ

ಕ್ರೀಡೆ ಎಂಬುದು ಕೇವಲ ವ್ಯಕ್ತಿಯ ಆರೋಗ್ಯ ಅಥವಾ ಮನರಂಜನೆಯ ಭಾಗ ಮಾತ್ರವಲ್ಲ. ಇದೊಂದು ಊರು, ನಾಡು, ದೇಶದ ಸಂಸ್ಕೃತಿ ಪರಂಪರೆಯನ್ನು ಜಗತ್ತಿಗೆ ತೋರಿಸುವಂತದ್ದು, ಅಂತರ್ ಮಟ್ಟ ಹಾಗೂ ಜಿಲ್ಲಾ ಮಟ್ಟ, ರಾಜ್ಯ ಮತ್ತು ರಾಷ್ಟ್ರ ಮಟ್ಟಗಳಲ್ಲಿ ಕ್ರೀಡಾಕೂಟವನ್ನು ಏರ್ಪಡಿಸಿ ಗೆದ್ದ ತಂಡಗಳನ್ನು ಗೌರವಿಸಲಾಗುತ್ತದೆ.

ಒಂದು ಭಾಗದ ಜನ ಇನ್ನೊಂದು ಭಾಗದ ಜನರೊಂದಿಗೆ ಬೆರೆಯುವ ಪರಸ್ಪರ ಸ್ಪರ್ಧಾತ್ಮಕ ಭಾವನೆಯೊಂದಿಗೆ ಬರೆಯುವ, ಪರಸ್ಪರ ಸ್ಪರ್ಧಾತ್ಮಕ ಭಾವನೆಯೊಂದಿಗೆ ತಮ್ಮ ಶ್ರೇಷ್ಠತೆ, ಗಟ್ಟಿತನವನ್ನು ತೋರಿಸುವ ಪ್ರಕ್ರಿಯೆಯು ಕೂಡ ನಡೆಯುತ್ತದೆ. ಹಾಗೆಯೇ ಒಲಿಂಪಿಕ್ಸ್, ಕಾಮನ್ ವೆಲ್ತ್, ಏಷ್ಯದ ಕ್ರೀಡಾಕೂಟಗಳಲ್ಲಿ ಭಾರತೀಯರು ಗೆದ್ದು, ಸಾಧನ ಗೈದು ತಾಕತ್ತಿನ ಪರಾಕಾಷ್ಟ ಮರೆದಿದ್ದಾರೆ.

ಅದೇ ರೀತಿಯಲ್ಲಿ ಹೇಳುವುದಾದರೆ ಬಾಕ್ಸಿಂಗ್, ಕ್ರಿಕೆಟ್, ಕಬ್ಬಡ್ಡಿ, ಕುಸ್ತಿ, ವೇಟ್ ಲಿಫ್ಟಿಂಗ್, ಶಾರ್ಪ್ ಶೂಟಿಂಗ್, ವ್ರೆಸ್ಲಿಂಗ್, ಹಾಕಿ, ಬ್ಯಾಡ್ಮಿಂಟನ್, ಟೆನ್ನಿಸ್ ಹೀಗೆ ಹಲವಾರು ಮುಂತಾದ ಆಟಗಳಲ್ಲಿ ದೇಶವನ್ನು ಪ್ರತಿನಿಧಿಸಿ ಗೆದ್ದು ಬೀಗಿದ ಆಟಗಾರರ ದೊಡ್ಡ ಪಟ್ಟಿಯೇ ಇದ್ದು, ಇವರೆಲ್ಲಾ ವಿಶ್ವ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ.

ಇದೆಲ್ಲಾ ಸಾಧನೆ ಸಾಧ್ಯವಾಗೋದು ದಿನ ನಿತ್ಯದ ಪ್ರಯತ್ನ, ಕಠಿಣ ಪರಿಶ್ರಮ, ಛಲ ಹಾಗೂ ದೃಢ ನಿರ್ಧಾರದಿಂದ ಆದರೆ, ಯಾರು ಕ್ರೀಡೆಯನ್ನೇ ವೃತ್ತಿ ಯನ್ನಾಗಿ ಸ್ವೀಕರಿಸುತ್ತಾರೋ ಅದೇ ಅವರ ಜೀವನವಾಗುತ್ತದೆ. ಯಾರು ಕ್ರೀಡೆಯನ್ನು ಪ್ರವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೋ. ಅವರಿಗೆ ಕ್ರೀಡೆ ಹವ್ಯಾಸವಾಗುತ್ತದೆ.

ಜೀವನವನ್ನೇ ಕ್ರೀಡೆಗಾಗಿ ಮಿಸಲಿಡುವುದಕ್ಕೂ, ಒಂದೆರಡು ಗಂಟೆ ಕ್ರೀಡೆಗಾಗಿ ಮೀಸಲಿಡುವುದಕ್ಕೂ ತುಂಬಾ ವ್ಯತ್ಯಾಸ ವಿದೆ. ಹಾಗಾಗಿ ಕ್ರೀಡಾ ಜೀವನದಲ್ಲಿ ಯಾವುದೇ ಭಾಗವಾದರೂ, ಅದರಿಂದ ಲಾಭವೆ ಹೊರತು ನೋವಂತು ಖಂಡಿತ ಇಲ್ಲ.

ಪ್ರತಿಭಾ ವಿ ಪೂಜಾರ

ಕ್ರೀಡೆ ಮತ್ತು ಆರೋಗ್ಯ: ಹಲವು ರೋಗಗಳಿಗೆ ಮದ್ದು ಯೋಗ ಅಂತಾ ಹೇಳತಾರೆ.ಹಾಗೆಯೇ ಹಲವು ಕಾಯಿಲೆಗಳಿಗೆ ಆಟವೇ ರಾಮಬಾಣ. ನಾವು ಆಡುವ ಪ್ರತಿಯೊಂದು ಆಟವೂ ನಮ್ಮ ದೈನಂದಿನ ಹಾಗೂ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕ್ರೀಡೆಯು ದೇಹಕ್ಕೆ ನಿಯಮಿತ ವ್ಯಾಯಾಮ ಆಗುತ್ತದೆ. ಹೆಚ್ಚಿನ ತೂಕವನ್ನು ತೊಡೆದು ಹಾಕುತ್ತದೆ. ಮನಸ್ಸು ಮತ್ತು ದೇಹವನ್ನು ಚೇತನ್ಯಮಯವಾಗಿಸುತ್ತದೆ. ಮೂಳೆ, ಸ್ನಾಯುಗಳನ್ನು ಬಲಪಡಿಸುತ್ತದೆ.

ಜನರಲ್ಲಿ ಶಿಸ್ತು, ಒಗ್ಗಟ್ಟು, ಸಂಘಟನಾತ್ಮಕ ಶಕ್ತಿಯನ್ನು ಬೆಳೆಸಲಾಗುತ್ತದೆ. ನಿದ್ರಾಹೀನತೆ, ಒತ್ತಡವನ್ನು ತೆಗೆದು ಹಾಕುತ್ತದೆ. ಆರೋಗ್ಯದ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗಿದೆ.
ಮನುಷ್ಯನ ಬೆಳವಣಿಗೆ, ಆರೋಗ್ಯಕರ ಜೀವನ ಶೈಲಿ ರೂಢಿಯಾಗಬೇಕಾದರೆ ಬಾಲ್ಯದಿಂದಲೇ ಉತ್ತಮ ಚಟುವಟಿಕೆಗಳನ್ನು ರೂಡಿ ಮಾಡಿಸಬೇಕಾಗುತ್ತದೆ.

ಒಟ್ಟಿನಲ್ಲಿ ಕ್ರೀಡೆಗಳು ಪರಂಪರೆಯ ಜತೆಗೆ ಸಾಗಿ ಬಂದಿದ್ದು, ಜಗತ್ತಿನ ತುಂಬಾ ವಿಸ್ತಾರಗೊಂಡಿದೆ. ಆಯಾ ದೇಶಗಳು ಒಂದೊಂದು ಕ್ರೀಡೆಯನ್ನು ಹೊಂದಿದ್ದು, ಜಿಲ್ಲಾ, ತಾಲೂಕು, ರಾಜ್ಯ ಹಾಗೂ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅನ್ಯ ರಾಜ್ಯ ರಾಷ್ಟ್ರದ ಜನರೊಡನೆ ಸ್ನೇಹ ಉಂಟಾಗುತ್ತದೆ. ಹಾಗೂ ಸಂಪರ್ಕ ಉಂಟಾಗುತ್ತದೆ. ಬದುಕಿನಲ್ಲಿ ಸೋಲು ಗೆಲುವು ನಮ್ಮ ದೃಷ್ಟಿಯಲ್ಲಿ ಸ್ವೀಕರಿಸಲು ಬೆಳವಣಿಗೆಯಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version