ದಿನದ ಸುದ್ದಿ

ಜಮೈಕಾ ಸಂಸತ್ ಉದ್ದೇಶಿಸಿ ರಾಷ್ಟ್ರಪತಿ ಭಾಷಣ | ಉಭಯ ರಾಷ್ಟ್ರಗಳ ನಡುವೆ ಸಹಕಾರ, ಕಲಿಕೆಗೆ ವಿಪುಲ ಅವಕಾಶ : ರಾಮನಾಥ್ ಕೋವಿಂದ್

Published

on

ಸುದ್ದಿದಿನ ಡೆಸ್ಕ್ : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕಳೆದ ರಾತ್ರಿ ಜಮೈಕಾ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದರು.

ಜಮೈಕಾದ ಸೆನೆಟ್ ಅಧ್ಯಕ್ಷ ಥಾಮಸ್ ಟವೆರೆಸ್ ಫಿನ್ಸನ್ ಮತ್ತು ಸದನದ ಸ್ಪೀಕರ್ ಮರಿಸಾ ಡಾಲ್ರಿಂಪಲ್, ರಾಷ್ಟ್ರಪತಿಗೆ ಸ್ವಾಗತ ಕೋರಿದರು. ಸ್ವಾಗತ ಭಾಷಣದ ನಂತರ ಮಾತನಾಡಿದ ರಾಷ್ಟ್ರಪತಿ, ಜಮೈಕಾದ ಜನರು ನೀಡಿದ ಆತ್ಮೀಯ ಸ್ವಾಗತವನ್ನು ಶ್ಲಾಘಿಸಿದರು.

ನಂತರ ಭಾರತ ಮುಂದಾಳತ್ವ ವಹಿಸುತ್ತಿರುವ ತಾಂತ್ರಿಕ ಬೆಳವಣಿಗೆಗಳ ಬಗ್ಗೆ ಸಂಸತ್ತಿಗೆ ವಿವರಿಸಿದ ರಾಷ್ಟ್ರಪತಿ, ಭಾರತದ ಶಿಕ್ಷಣ ಕ್ಷೇತ್ರವು ಹೇಗೆ ಪ್ರಗತಿ ಹೊಂದುತ್ತಿದೆ ಎಂಬುದರ ಬಗ್ಗೆ ವಿಶೇಷ ಉಲ್ಲೇಖ ಮಾಡಿದರು.

ಉಭಯ ರಾಷ್ಟ್ರಗಳ ನಡುವೆ ಸಹಕಾರ ಮತ್ತು ಪರಸ್ಪರ ಕಲಿಕೆಗೆ ವಿಪುಲ ಅವಕಾಶಗಳಿವೆ. ಇದರಲ್ಲಿ ರೈಲ್ವೆ, ಕೃಷಿ, ಆತಿಥ್ಯ ಮತ್ತು ಪ್ರವಾಸೋದ್ಯಮವೂ ಸೇರಿದೆ ಎಂದರು. ತಮ್ಮ ಭಾಷಣದ ಕೊನೆಯಲ್ಲಿ ಎರಡೂ ರಾಷ್ಟ್ರಗಳ ನಡುವಿನ ಸಂಬಂಧಗಳು ಒಟ್ಟಿಗೆ ಬೆಳೆಯುತ್ತವೆ ಮತ್ತು ಹೊಸ ಎತ್ತರವನ್ನು ತಲುಪುತ್ತವೆ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version