ರಾಜಕೀಯ
ಪತ್ರಿಕಾ ಸ್ವಾತಂತ್ರ್ಯ ಹರಣ: ಕೇಂದ್ರಕ್ಕೆ ಸಂಪಾದಕರ ಮಂಡಳಿ ತರಾಟೆ
ಸುದ್ದಿದಿನ ಡೆಸ್ಕ್: ಪ್ರತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಪ್ರಕರಣಗಳು ಈಚೆಗೆ ಘಟಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸಂಪಾದಕರ ಮಂಡಳಿ (ಎಡಿಟರ್ಸ್ ಗಿಲ್ಡ್) ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.
ಎಬಿಪಿ ನ್ಯೂಸ್ ವಾಹಿನಿಯಲ್ಲಿ ಪ್ರಕಟವಾದ ಸುದ್ದಿ ಸಂಬಂಧ ಹಿರಿಯ ಪತ್ರಕರ್ತರನ್ನು ಕೆಲಸದಿಂದ ತೆಗೆದುಹಾಕಿರುವ ನಿರ್ಣಯವನ್ನು ಖಂಡಿಸಿರುವ ಮಂಡಳಿಯು ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದೆ.
ಸರಕಾರವನ್ನು ಪ್ರಶ್ನಿಸುವ ಹಾಗೂ ತರಾಟೆಗೆ ತೆಗೆದುಕೊಳ್ಳುವ ಹಕ್ಕು ಪ್ರತಿ ಪತ್ರಕರ್ತನಿಗಿರುತ್ತದೆ ಅದನ್ನು ಕದಿಯುವ ಪ್ರಯತ್ನ ಮಾಡಬಾರದು. ಮಾಧ್ಯಮಗಳ ಮೇಲೆ ಒತ್ತಡ ಹಾಕುವುದು, ಹಣ ಕೊಟ್ಟು ಅವರನ್ನು ಕೊಳ್ಳುವ ಯತ್ನ ಮಮಾಡುವುದು ಸರಿಯಲ್ಲ. ಇದರಿಂದ ಭವಿಷ್ಯದಲ್ಲಿ ಭಾರಿ ಪರಿಣಾಮ ಎದುರಿಸಬೇಕಾಗುತ್ತಿದೆ ಎಂದು ಮಂಡಳಿ ಎಚ್ಚರಿಸಿದೆ.