ದಿನದ ಸುದ್ದಿ

ಹೈದರಾಬಾದಿನ ನಿಜಾಂ ಮ್ಯೂಸಿಯಂ ಆಂಟಿಕ್ ಪೀಸ್ ಕಳವು

Published

on

ಸುದ್ದಿದಿನ ಡೆಸ್ಕ್:  ಹೈದರಾಬಾದಿನ ಪತ್ತರ್ಗಟ್ಟಿಯ ಏಳನೇ ನಿಜಾಂ ಸೇರಿದ ಅಮೂಲ್ಯವಾದ ವಜ್ರಖಚಿತ ಬಂಗಾರದ ಟಿಫಿನ್ ಬಾಕ್ಸ್, ಬಂಗಾರದ ಟೀಕಪ್, ಎರಡು ಸಾಸರ್, ಒಂದು ಸ್ಪೂನ್ ಕಳವಾಗಿದೆ. ಪತ್ತರಗಟ್ಟಿಯಲ್ಲಿರುವ ನಿಜಾಂ ಮ್ಯೂಸಿಯಂನಲ್ಲಿ ಇಡಲಾಗಿದ್ದ ಅಮೂಲ್ಯವಾದ ವಸ್ತುಗಳನ್ನು ನಾಲ್ಕು ಅಡಿ ಎತ್ತರದ ವೆಂಟಿಲೇಟರ್ ಮುರಿದು ದುಷ್ಕರ್ಮಿಗಳು ದೋಚಿದ್ದಾರೆ.

ಹೈದರಾಬಾದಿನ ಪತ್ತರಗಟ್ಟಿಯಲ್ಲಿರುವ ನಿಜಾಂ ಮ್ಯೂಸಿಯಂನಲ್ಲಿ ನಿಜಾಮರ ಕಾಲದ ಬೆಲೆಬಾಳುವ ಪುರಾತನ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. 1,800 ರೂ. ಬೆಲೆಯಿದ್ದಾಗ ನಡುವೆ ನಿಜಾಮರಿಗೆ ಕೊಡುಗೆ ನೀಡಿದ್ದ ಟಿಫಿನ್ ಬಾಕ್ಸ್ ಈಗ 55 ಲಕ್ಷ ರೂ. ಮೌಲ್ಯ ಹೊಂದಿದ್ದು, ಇದು ಮಾರುಕಟ್ಟೆಯಲ್ಲಿ ಒಂದು ಕೋಟಿ ರೂ. ವರೆಗೂ ಬೆಲೆ ಬಾಳಬಹುದು ಎಂದು ಅಂದಾಜಿಸಲಾಗಿದೆ.

ಆಂಟಿಕ್ ವಸ್ತುಗಳ ಮೇಲೆ ನಿಗಾ ಇಡಲು ಹಾಕಿದ್ದ ಸಿಸಿಟಿವಿ ಕ್ಯಾಮೆರಾವನ್ನು ಕಳ್ಳರು ಬೇರೆಡೆಗೆ ತಿರುಗಿಸಿದ್ದಾರೆ. ಮ್ಯೂಸಿಯಂನ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳ ನುಗ್ಗಿ ಆಂಟಿಕ್ ಪೀಸ್ ಗಳನ್ನು ಕದ್ದೊಯ್ದಿದ್ದಾರೆ. ಸೆಕ್ಯುರಿಟಿ ಗಾರ್ಡ್ ಮತ್ತು ಮ್ಯೂಸಿಯಂ ನಿರ್ವಹಣೆ ಹೊತ್ತಿರುವ ನಿಜಾಂ ಪೆವಿಲಿಯನ್ ಟ್ರಸ್ಟ್ ಆಂಟಿಕ್ ಪೀಸ್ಗಳು ಕಳವಾಗಿರುವುದಕ್ಕೆ ಕಾರಣ ಎಂದು ಏಳನೇ ನಿಜಾಮನ ಮೊಮ್ಮಗ ನವಾಬ್ ನಜಫ್ ಅಲಿ ಖಾನ್ ದೂರಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version