ದಿನದ ಸುದ್ದಿ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ; ಹಾವೇರಿ ಜಿಲ್ಲೆ ರೈತರಿಗೆ 62 ಕೋಟಿ 20 ಲಕ್ಷ ರೂಪಾಯಿ ಹಣ ಜಮೆ
ಸುದ್ದಿದಿನ ಡೆಸ್ಕ್ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ 38 ಸಾವಿರ ರೈತರಿಗೆ 11 ಕಂತುಗಳಲ್ಲಿ 62 ಕೋಟಿ 20 ಲಕ್ಷ ರೂಪಾಯಿ ಹಣ ಜಮೆ ಮಾಡಲಾಗಿದೆ.
ಕಳೆದ 8 ವರ್ಷದಲ್ಲಿ ತಾಲ್ಲೂಕಿನ 1 ಲಕ್ಷದ 831ರೈತರು ವಿಮೆ ಪರಿಹಾರ ಪಡೆದಿದ್ದಾರೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದ್ದಾರೆ.
ಹಾನಗಲ್‌ನಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, 14 ಹಾಗೂ 15 ನೇ ಹಣಕಾಸು ಯೋಜನೆಯಲ್ಲಿ ಒಟ್ಟು 60 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 21 ಗ್ರಾಮಗಳ ಆಯ್ಕೆ ಮಾಡಿ 8 ಕೋಟಿ 61ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಮಾಡಲಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 1ಸಾವಿರ 068ಮನೆಗಳು ಮಂಜೂರಾತಿಯಾಗಿದೆ. ಗ್ರಾಮ ಸಡಕ್ ಯೋಜನೆಯಲಿ 66 ಕೋಟಿ ರೂಪಾಯಿ ವೆಚ್ಚದಲ್ಲಿ 75 ಕಿಲೋಮೀಟರ್ ಗ್ರಾಮೀಣ ರಸ್ತೆಗಳ ನಿರ್ಮಾಣ ಮಾಡಲಾಗಿದೆ. ಜೆಜೆಎಂ ಅಡಿಯಲ್ಲಿ 30 ಗ್ರಾಮಗಳಲ್ಲಿ 8 ಸಾವಿರ ಮನೆಗಳಿಗೆ ನಲ್ಲಿ ಮೂಲಕ ಕುಡಿವ ನೀರು ಪೂರೈಸಲಾಗಿದೆ ವಿವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243