ರಾಜಕೀಯ
ಮೋದಿಕೇರ್ ಯೋಜನೆ; 24 ಗಂಟೆಯೊಳಗೆ ಸಾವಿರ ರೋಗಳಿಗೆ ತಲುಪಿತು ಪ್ರಯೋಜನೆ
ಸುದ್ದಿದಿನ ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಪ್ರಧಾನ್ ಜನರಲ್ ಆರೋಗ್ಯ ಯೋಜನೆ ಜಾರಿಯಾಗಿ 24 ಗಂಟೆ ಆಗುವುದರೊಳಗೆ 1,000ಕ್ಕೂ ಅಧಿಕ ರೋಗಿಗಳು ಆರೋಗ್ಯ ವಿಮಾ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಚತ್ತೀಸಗಡ ಮತ್ತು ಹರಿಯಾಣ, ಜಾರ್ಖಂಡ್, ಅಸ್ಸಾಂ ಮತ್ತು ಮಧ್ಯಪ್ರದೇಶ ಯೋಜನೆಯನ್ನು ಹೆಚ್ಚು ಬಳಸಿಕೊಂಡ ರಾಜ್ಯಗಳಾಗಿವೆ ಎದು ಅಧಿಕೃತ ಮೂಲಗಳು ತಿಳಿಸಿವೆ.
ರಾಂಚಿಯಲ್ಲಿ ಭಾನುವಾರ ಪ್ರಧಾನಿ ಮೋದಿ ಐವರು ಫಲಾನುಭವಿಗಳಿಗೆ ಸಾಂಕೇತಿಕವಾಗಿ ಐದು ಚಿನ್ನದ ಕಾರ್ಡುಗಳನ್ನು ಹಸ್ತಾಂತರಿಸಿದರು. ಜಮ್ ಶೆಡ್ ಪುರದ ಈಸ್ಟ್ ಸಿಂಗ್ಬುಮ್ ಸಡರ್ ಆಸ್ಪತ್ರೆಯಲ್ಲಿ 22 ವರ್ಷ ವಯಸ್ಸಿನ ಪೂನಮ್ ಮಹ್ಟೋಗೆ ಹೆಣ್ಣು ಮಗುವನ್ನು ಜನಿಸಿದರು. ಈ ಯೋಜನೆ ಜಾರಿಗೊಂಡ ಅತಿ ಶೀಘ್ರದಲ್ಲಿ ಈ ಆರೋಗ್ಯ ಕಾರ್ಯಕ್ರಮದ ಪ್ರಯೋಜನೆ ಪಡೆದ ಮೊದಲ ಫಲಾನುಭವಿಯಾಗಿದ್ದಾರೆ.
ಮೋದಿ ಯೋಜನೆ ಜಾರಿಗೊಂಡ ಕೆಲವೇ ಗಂಟೆಗಳಲ್ಲಿ ಯೂರೋಲಜಿ, ಸ್ಟೆನ್ಟಿಂಗ್ ಮತ್ತು ಸಿಸ್ಟೊಸ್ಕೊಪಿ ಸೇರಿದಂತೆ ವಿವಿಧ ಚಿಕಿತ್ಸಾ ವಿಧಾನಗಳಿಗಾಗಿ ಜಾರ್ಖಂಡ್ ನಲ್ಲಿ ರಾಂಚಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ಕನಿಷ್ಠ ನಾಲ್ಕು ರೋಗಿಗಳು ದಾಖಲಾಗಿದ್ದರು.