ದಿನದ ಸುದ್ದಿ
ಇಂದು ನಾಲ್ಕು ರಾಷ್ಟ್ರಗಳ ನಾಯಕರ ವರ್ಚುಯಲ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ
ಸುದ್ದಿದಿನ ಡೆಸ್ಕ್ : ಪ್ರಧಾನಿ ನರೇಂದ್ರ ಮೋದಿ ಇಂದು ಮೊದಲ ಐ2ಯು2 ಭಾರತ-ಇಸ್ರೇಲ್- ಯುಎಇ-ಅಮೆರಿಕ ನಾಯಕರ ವರ್ಚುಯಲ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಸ್ರೇಲ್ ಪ್ರಧಾನಿ ಯೈರ್ ಲ್ಯಾಪಿಡ್, ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಹಾಗೂ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಈ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ನಾಯಕರು ಐ೨ಯು2 ಚೌಕಟ್ಟಿನೊಳಗೆ ಸಂಭವನೀಯ ಜಂಟಿ ಯೋಜನೆಗಳ ಬಗ್ಗೆ ಚರ್ಚಿಸಲಿದ್ದಾರೆ. ಆಯಾ ಪ್ರದೇಶಗಳ ಹಾಗೂ ಅದರಾಚೆಗಿನ ವ್ಯಾಪಾರ ಮತ್ತು ಹೂಡಿಕೆಯಲ್ಲಿ ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸಲು ಪರಸ್ಪರ ಆಸಕ್ತಿಯ ಇತರ ಸಾಮಾನ್ಯ ಕ್ಷೇತ್ರಗಳ ಬಗ್ಗೆಯೂ ನಾಯಕರು ಸಮಾಲೋಚಿಸಲಿದ್ದಾರೆ.
ಈ ಯೋಜನೆಗಳು ಆರ್ಥಿಕ ಸಹಕಾರಕ್ಕೆ ಮಾದರಿಯಾಗಿದ್ದು, ಹಲವಾರು ಉದ್ಯಮಿಗಳು ಹಾಗೂ ಕಾರ್ಮಿಕರಿಗೆ ಅವಕಾಶ ಒದಗಿಸಲಿವೆ. ಕಳೆದ ವರ್ಷ ಅಕ್ಟೋಬರ್18ರಂದು ನಡೆದ ನಾಲ್ಕು ದೇಶಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಈ ಗುಂಪು ರಚಿಸಲಾಗಿದೆ. ಐ2ಯು2 ಗುಂಪು, ಜಲ, ಇಂಧನ, ಸಾರಿಗೆ, ಬಾಹ್ಯಾಕಾಶ, ಆರೋಗ್ಯ ಮತ್ತು ಆಹಾರ ಭದ್ರತೆಯಂತಹ ಆರು ಪರಸ್ಪರ ಗುರುತಿಸಲ್ಪಟ್ಟ ಕ್ಷೇತ್ರಗಳಲ್ಲಿ ಜಂಟಿ ಹೂಡಿಕೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243