ರಾಜಕೀಯ

ಪ್ರಧಾನಮಂತ್ರಿ ನರೇಂದ್ರ ಮೋದಿ-ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇಂದು ವರ್ಚುವಲ್ ಮೂಲಕ ಮಾತುಕತೆ; ಪ್ರಮುಖ ವಿಷಯಗಳ ಚರ್ಚೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ವರ್ಚುವಲ್ ಮೂಲಕ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಜೊತೆ ಮಾತುಕತೆ ನಡೆಸಲಿದ್ದಾರೆ.

ಉಭಯ ದೇಶಗಳ ನಾಯಕರು ಪ್ರಸ್ತುತದ ದ್ವಿಪಕ್ಷೀಯ ಸಹಕಾರ ಹಾಗೂ ದಕ್ಷಿಣ ಏಷ್ಯಾ ಮತ್ತು ಇಂಡೊ ಪೆಸಿಫಿಕ್ ವಲಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಹಾಗೂ ಪರಸ್ಪರ ಹಿತಾಸಕ್ತಿಗೆ ಸಂಬಂಧಿಸಿದ ಜಾಗತಿಕ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ದ್ವಿಪಕ್ಷೀಯ ಸಮಗ್ರ ಜಾಗತಿಕ ಕಾರ್ಯತಂತ್ರ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಿಕೊಂಡು ಹೋಗುವುದು ಸೇರಿದಂತೆ ಅನೇಕ ಉನ್ನತ ಮಟ್ಟದ ಕಾರ್ಯಕ್ರಮಗಳ ಕುರಿತ ಚರ್ಚೆಗೆ ನರೇಂದ್ರ ಮೋದಿ ಮತ್ತು ಜೋ ಬೈಡೆನ್ ನಡುವಿನ ಸಭೆ ಉತ್ತಮ ವೇದಿಕೆ ಒದಗಿಸಲಿದೆ. ಈ ಮೂಲಕ ಅಮೆರಿಕ ಮತ್ತು ಭಾರತ ನಡುವೆ ಉತ್ತಮ ಬಾಂಧವ್ಯ ಬಲವರ್ಧನೆಗೆ ಒತ್ತು ನೀಡಲಾಗುತ್ತದೆ.

ಉಭಯ ದೇಶಗಳ ತಲಾ ಇಬ್ಬರು ಸಚಿವರಿಂದ 2+2ಮಾತುಕತೆ ನಡೆಯುವ ಮೊದಲು ಮೋದಿ ಹಾಗೂ ಬೈಡೆನ್ ಮಧ್ಯೆ ಈ ಮಾತುಕತೆ ನಡೆಯಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version