ದಿನದ ಸುದ್ದಿ

ವಿದ್ಯುತ್ ಕ್ಷೇತ್ರದಲ್ಲಿ ಹಲವು ಸುಧಾರಣೆಗಳಿಗೆ ನಾಂದಿ : ಪ್ರಧಾನಮಂತ್ರಿ ನರೇಂದ್ರ ಮೋದಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ಪ್ರಧಾನಮಂತ್ರಿ ನರೇಂದ್ರ ಮೋದಿ (Prime minister Narendra Modi) , ಇಂದು ಇಂಧನ ಸಚಿವಾಲಯದ ಮಹತ್ವಾಕಾಂಕ್ಷೆಯ ಪರಿಷ್ಕೃತ ವಿತರಣಾ ವಲಯದ ಯೋಜನೆಗೆ ಚಾಲನೆ ನೀಡಿದರು.

ವಿಡಿಯೋ ಕಾನ್ಫರೆನ್ಸ್ ( Vedio Conference) ಮೂಲಕ ’ಉಜ್ವಲ ಭಾರತ ಉಜ್ವಲ ಭವಿಷ್ಯ-ಪವರ್@2047’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಈ ಯೋಜನೆಯನ್ನು ಅನಾವರಣಗೊಳಿಸಿದರು.

ಎನ್.ಟಿ.ಪಿ.ಸಿಯಿಂದ 5 ಸಾವಿರದ 200 ಕೋಟಿ ರೂಪಾಯಿ ಮೊತ್ತದ ಹಸಿರು ಇಂಧನ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಸೌಭಾಗ್ಯ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ನ್ಯಾಷನಲ್ ಸೋಲಾರ್ ರೂಪ್ ಟಾಪ್ ಪೋರ್ಟಲ್ ಲೋಕಾರ್ಪಣೆ ಮಾಡಿದರು.

ಇದನ್ನೂ ಓದಿ | ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ ; ಬಾಲಕರ ಮೇಲುಗೈ

ನಂತರ ಮಾತನಾಡಿದ ಪ್ರಧಾನಿ, ಕಳೆದ 8 ವರ್ಷಗಳಲ್ಲಿ ಹಲವಾರು ಮಹತ್ವದ ಸುಧಾರಣೆಗಳನ್ನು ತರಲಾಗಿದ್ದು, ವಿದ್ಯುತ್ ವಲಯದಲ್ಲೂ ನಾನಾ ಸುಧಾರಣೆಗಳನ್ನು ತರಲಾಗಿದೆ. ಲಡಾಖ್ ಮತ್ತು ಗುಜರಾತ್‌ನಲ್ಲಿ ಎರಡು ದೊಡ್ಡ ಹಸಿರು ಜಲಜನಕ ಯೋಜನೆಗಳ ಕೆಲಸ ಇಂದಿನಿಂದ ಪ್ರಾರಂಭವಾಗುತ್ತಿದೆ. ಲಡಾಖ್‌ನಲ್ಲಿ ಸ್ಥಾಪಿಸಲಾಗುತ್ತಿರುವ ಘಟಕ ದೇಶದ ವಾಹನಗಳಿಗೆ ಹಸಿರು ಜಲಜನಕವನ್ನು ಉತ್ಪಾದಿಸುತ್ತದೆ. ಹಸಿರು ಜಲಜನಕ ಆಧಾರಿತ ಸಾರಿಗೆ ಕ್ಷೇತ್ರದ ವಾಣಿಜ್ಯ ಬಳಕೆಯನ್ನು ಸಾಧ್ಯವಾಗಿಸುವ ದೇಶದ ಮೊದಲ ಯೋಜನೆ ಇದಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version