ದಿನದ ಸುದ್ದಿ
ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ-3.0 ಅಡಿ ಅರ್ಜಿ ಆಹ್ವಾನ
ಸುದ್ದಿದಿನ,ಬೆಂಗಳೂರು ಗ್ರಾಮಾಂತರ ಜಿಲ್ಲೆ : ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಮಹಾಮಾರಿಯ ಪ್ರಭಾವವನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ಸಚಿವಾಲಯವು ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ-3.0 ರಡಿಯಲ್ಲಿ ಹೆಚ್ಚಿನ ಸಹಾಯಕ ಆರೋಗ್ಯ ಸಿಬ್ಬಂದಿಗಳನ್ನು ಒಂದು ತಿಂಗಳ ತರಬೇತಿಯನ್ನು ನೀಡಿ, ನೇಮಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪಿಯುಸಿ-ವಿಜ್ಞಾನ (PUC-Science) ಕೋರ್ಸ್ ಮುಗಿಸಿದವರಿಗೆ ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್-ಬೆಸಿಕ್ (Emergency Medical Technician- Basic), ಎಸ್.ಎಸ್.ಎಲ್.ಸಿ/ 8ನೇ ತರಗತಿ(SSLC/ 8th Std) ಓದಿದವರಿಗೆ ಜನರಲ್ ಡ್ಯೂಟಿ ಅಸಿಸ್ಟೆಂಟ್ (General Duty Assistant (GDA)), ಎಸ್.ಎಸ್.ಎಲ್.ಸಿ. ಓದಿದವರಿಗೆ(SSLC) ಜನರಲ್ ಡ್ಯೂಟಿ ಅಸಿಸ್ಟೆಂಟ್ (General Duty Assistant-Advance), ಎಸ್.ಎಸ್.ಎಲ್.ಸಿ/ 8ನೇ ತರಗತಿ(SSLC / 8th Std) ಓದಿದವರಿಗೆ ಹೋಂ ಹೆಲ್ತ್ ಏಡ್(Home health Aid).
ಎಸ್.ಎಸ್.ಎಲ್.ಸಿ/ ಐ.ಟಿ.ಐ/ ಡಿಪ್ಲೋಮಾ (SSLC / ITI / Diploma) ಮೆಡಿಕಲ್ ಎಕ್ವಿಪ್‌ಮೆಂಟ್ ಟೆಕ್ನಾಲಜಿ ಅಸಿಸ್ಟೆಂಟ್ (Medical Equipment Technology Assistant), ಪಿಯುಸಿ-ವಿಜ್ಞಾನ (PUC-Science) ಓದಿದವರು ಫಿಲೆಬೊಟಾಮಿಸ್ಟ್ (Phlebotomist) ಕೋರ್ಸ್ಗಳಿಗೆ ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಯವರ ಕಚೇರಿಯಲ್ಲಿ ದೂರವಾಣಿ ಮೂಲಕ ನೊಂದಣಿ ಮಾಡಿಕೊಳ್ಳಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ/ ನೋಂದಣಿಗಾಗಿ ಲಕ್ಮೀನಾರಾಣರಾಜು, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳು ಮೊ.ಸಂ.: 7019799684, ದರ್ಶಿಣಿ ಮೊ.ಸಂ.: 8970122219, ಸಾದಿಖ್ ಪಾಷ ಮೊ.ಸಂ.: 8618389432, ಇ-ಮೇಲ್ ವಿಳಾಸ: dsdobngrural@gmail.com ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243