ದಿನದ ಸುದ್ದಿ
‘ಮೋದಿ’ ಸಾರ್ವಜನಿಕರ ಮೊಬೈಲ್ ಗೆ 500ರೂ ಫ್ರೀ ರೀಚಾರ್ಜ್ ಮಾಡುತ್ತಾರೆಂಬ ಸುದ್ದಿಯ ಹಿಂದಿನ ಮರ್ಮ..!
ಸುದ್ದಿದಿನ ಡೆಸ್ಕ್ : ತನ್ನ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಷ್ಠಿತ ಕಂಪನಿಯೊಂದು ಉಚಿತವಾಗಿ ನಿಮ್ಮ ಮೊಬೈಲ್ ಗೆ ರೀಚಾರ್ಜ್ ಕೊಡುಗೆ ನೀಡಲಿದೆ ಎಂಬ ಸುಳ್ಳು ಸುದ್ದಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈಗ ಪ್ರಧಾನಿ ಮೋದಿ ಹೆಸರಲ್ಲಿಯೂ ಸಹ ಇಂಥದೇ ಒಂದು ಸುಳ್ಳುಸುದ್ದಿ ವೈರಲ್ ಆಗಿದೆ.
ಉಚಿತ ರೀಚಾರ್ಜ್ ಸಂದೇಶವನ್ನು ವ್ಯಕ್ತಿ ತನ್ನ ಮೂರು ಗುಂಪುಗಳಿಗೆ ಆ ಸಂದೇಶವನ್ನು ಶೇರ್ ಮಾಡಬೇಕು ಎಂಬ ಷರತ್ತು ಹಾಕಲಾಗಿರುತ್ತದೆ. ಹಾಗೆ ಮಾಡಿದ ಬಳಿಕ ನಿಮ್ಮ ಮೊಬೈಲ್ ಗೆ 500 ರೂ ಹಣ ಸಂದಾಯವಾಗುತ್ತೆ, ಅದನ್ನು ಕನ್ ಪರ್ಮ್ ಮಾಡಿಕೊಳ್ಳಲು ಈ ಕೆಳಗಿನ ನಂಬರ್ ಅನ್ನು ಒತ್ತಿ ಎಂದು ಅದರಲ್ಲಿ ಸೂಚಿಸಲಾಗಿದೆ. ಈ ರೀತಿಯಾಗಿ ಮಾಡಿದನಂತರ ನಿಜಕ್ಕೂ ಪ್ರಧಾನಿ ಮೋದಿ ಭಾರತೀಯರಿಗೆ ಉಚಿತವಾಗಿ ರೀಚಾರ್ಜ್ ಮಾಡಿದ್ದಾರಾ ಎಂದು ಹುಡುಕಾಟ ಶುರುಮಾಡಿದಾಗ ಅದರ ನಿಜ ಬಣ್ಣ ಬಯಲಾಗಿದೆ. ಅದೊಂದು ಸುಳ್ಳು ಸುದ್ದಿ ಎಂದು ತಿಳಿದು ಬಂದಿದೆ.
ಹೀಗೆ ಮಾಡಿದ ನಂತರ ನೀವು ವಾಟ್ಸಾಪ್ ಗ್ರೂಪ್ ಗೆ ಸಂದೇಶ ಶೇರ್ ಮಾಡಿದ ನಂತರ ನಿಮ್ಮ ಮೊಬೈಲ್ ಗಳಿಗೆ 500 ರೂ ಹಣ ರೀಚಾರ್ಜ್ ಆಗುವುದಿಲ್ಲ. ಆದರೆ ನೀವು ಕಳುಹಿಸಿದ ಇಂತಹ ಸಂದೇಶಗಳು ಬಳಕೆದಾರನ ವೈಯಕ್ತಿಕ ಮಾಹಿತಿ ಸೋರಿಕೆಯಾಗಬಹುದು ಮತ್ತು ಮೊಬೈಲ್ ಗೆ ವೈರಸ್ ಗಳು ಸೇರಿ ಮೊಬೈಲ್ ಹ್ಯಾಂಗ್ ಆಗ ಬಹುದು.
ಇಂತಹ ಸಂದೇಶಗಳು ಹರಿದಾಡುತ್ತಿರುವುದು ಇದೇ ಮೊದಲಲ್ಲ. ಮೋದಿ ಹೆಸರಲ್ಲಿ ಜಿಯೋ, ಅಡಿಡಾಸ್ ನಂತಹ ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ಸುಮಾರು ಸುಳ್ಳು ಸುದ್ದಿಗಳು ಹರಿದಾಡಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401