ದಿನದ ಸುದ್ದಿ
ಖಾಸಗಿ ಬಸ್ ಹಾವಳಿ ; ಬಸ್ ಟಾಪ್ ಮೇಲೆ ಕುಳಿತ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟ
ಸುದ್ದಿದಿನ ಡೆಸ್ಕ್ |ಎರಡು ಖಾಸಗಿ ಬಸ್ 400ಕ್ಕೂ ಹೆಚ್ಚು ವಿಧ್ಯಾರ್ಥಿಗಳು, 38 ಕಿ.ಮೀ ಸಾಗಬೇಕು, ಬಸ್ ಟಾಪ್ ಮೇಲೆ ಕುಳಿತ ವಿಧ್ಯಾರ್ಥಿಗಳು, ಶಾಲಾ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿವೆ.ಮಿಟ್ಟೆಮರಿ-ಪಾತಪಳ್ಯ-ಬಾಗೆಪಲ್ಲಿ ಮಾರ್ಗದ ವಿಧ್ಯಾರ್ಥಿಗಳಿಗೆ ದೇವರೆ ಗತಿ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಗ್ರಾಮಗಳಿಗೆ ಸಾರಿಗೆ ಬಸ್ಸುಗಳು ಬರೋದೆ ಇಲ್ಲ, ಖಾಸಗಿ ಬಸ್ ಹಾವಳಿ ತಪ್ಪಿಲ್ಲ.
ಟಾಪ್ ಮೇಲೆ, ಕಂಬಿಗಳಿಗೆ ನಾತಾಡ್ಕೊಂಡು 38.ಕಿ.ಮೀ ದೂರದ ಬಾಗೆಪಲ್ಲಿ ಕಾಲೇಜಿಗೆ ಬರ್ಬೇಕು. ಸರ್ಕಾರಿ ಅಧಿಕಾರಿಗಳ ನಿರ್ಲಕ್ಷಕ್ಕೆ ಮಕ್ಕಳ ಜೀವದ ಜೊತೆ ಆಟವಾಡುತ್ತಿವೆ. ಮಿತಿ ಮೀರಿದ ಖಾಸಗಿ ಬಸ್‍ಗಳ ಹಾವಳಿ ಹೆಚ್ಚಾಗಿದೆ. ಕರ್ನಾಟಕ-ಆಂದ್ರ ಗಡಿ ಬಾಗದ ಜನರ ಗೋಳು ಹೇಳ ತೀರದ್ದಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401