ಸಿನಿ ಸುದ್ದಿ
ಪಿಗ್ಗಿಯ 2017 ರ ಆದಾಯ ಎಷ್ಟು ಗೊತ್ತಾ..?
ಸುದ್ದಿದಿನ ಡೆಸ್ಕ್ | ಜಾಗತಿಕ ತಾರೆಯಾಗಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ವಿಭಿನ್ನ ಸಿನೆಮಾಗಳಲ್ಲಿ ಅಭಿನಯಿಸುವ ಮೂಲಕ ಸಿನಿರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಬಾಲಿವುಡ್ ಮತ್ತು ಹಾಲಿವುಡ್ನಲ್ಲಿನ ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ಪ್ರಿಯಾಂಕಾ ಅವರು ಶಾಂಪೂ ಬ್ರಾಂಡ್ನ ರಾಯಭಾರಿ ಮತ್ತು ಉಡುಪುಗಳ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ, ಇವೆರಡಿರಿಂದ ಕಳೆದ ವರ್ಷ ಅವರ ಆದಾಯವನ್ನು ಹೆಚ್ಚಿಸಿದವು.
ಫೋರ್ಬ್ಸ್ ಪ್ರಕಾರ, 2017 ರಲ್ಲಿ ಚೋಪ್ರಾ 11 ದಶಲಕ್ಷ ಡಾಲರ್ (77 ಕೋಟಿ ರೂ.) ಆದಾಯಗಳಿಸಿದ್ದು, ಎಲ್ಲಾ ತೆರಿಗೆಗಳ ಪಾವತಿ ನಂತರ, ಅವರಲ್ಲಿ ಉಳಿದದ್ದು 8 ಮಿಲಿಯನ್ ಡಾಲರ್ (56 ಕೋಟಿ ರೂ).
ಸುದ್ದಿದಿನ.ಕಾಂ|ವಾಟ್ಸಾಪ್|9986715401