ಸಿನಿ ಸುದ್ದಿ

ಬಾಲಿವುಡ್-ಹಾಲಿವುಡ್ ಸಮಾಗಮ : ನಿಕ್-ಪ್ರಿಯಾಂಕ ನಿಶ್ಚಿತಾರ್ಥ !

Published

on

ಸುದ್ದಿದಿನ ಡೆಸ್ಕ್ | ಬಾಲಿವುಡ್ ದುನಿಯಾದಲ್ಲಿ ತನ್ನದೇ ಶೈಲಿಯ ಛಾಪು ಮೂಡಿಸಿರುವ ಬಾಲಿವುಡ್ ಹಾಗೂ ಹಾಲಿವುಡ್  ಬೆಡಗಿ ಪ್ರಿಯಾಂಕ ಚೋಪ್ರಾ ಮತ್ತು ಅಮೇರಿಕಾದ ಖ್ಯಾತ ಸಿಂಗರ್  ನಿಕ್ ಜಾನ್ಸ್ ರ ನಿಶ್ಚಿತಾರ್ಥ ಮಹೋತ್ಸವ ನೆನ್ನೆ ಮುಂಬೈನ ಅವರ ನಿವಾಸದಲ್ಲಿ ನೆರವೇರಿತು.

ಹಳದಿ ಬಣ್ಣದ, ಭಾರತೀಯ, ಸಾಂಪ್ರದಾಯಿಕ ಶೈಲಿಯ, ಡಿಸೈನರ್ ಸಲ್ವಾರ್ ಕಮೀಜ್ ನಲ್ಲಿ ಪ್ರಿಯಾಂಕ ಮಿಂಚುತ್ತಿದ್ದರೆ, ನಿಕ್ ಬಿಳಿಯ ಶೇರ್ವಾಣಿಯಲ್ಲಿ ಮಿಂಚಿದರು. ಆಪ್ತವಲಯದ ಕುಟುಂಬಸ್ಥರ ಸಮ್ಮುಖದಲ್ಲಿ NP ಜೋಡಿ ಉಂಗುರ ಬದಲಾಯಿಸಿಕೊಂಡರು.

ಪ್ರಿಯಾಂಕ ಇತ್ತೀಚೆಗೆ ಹಾಲಿವುಡ್ ನಲ್ಲಿ ವಿಶೇಷ ನೆಲೆ ಕಂಡುಕೊಂಡಿದ್ದಾರೆ.ಇನ್ನು ನಿಕ್ ಕೂಡಾ ಪ್ರತಿಷ್ಠಿತ ಅಂತರಾಷ್ಟ್ರೀಯ ಹಾಡುಗಾರ. ಇವರಿಬ್ಬರ ಜೋಡಿ ಗೆ ಸುದ್ದಿದಿನದ ಶುಭ ಹಾರೈಕೆಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version