ದಿನದ ಸುದ್ದಿ

ಪ್ರಿಯಾಂಕ ಗಾಂಧಿ ಬಳಿ ಉತ್ತರ ಪ್ರದೇಶ ಪೊಲೀಸರಿಂದ ಕ್ಷಮೆಯಾಚನೆ

Published

on

ಸುದ್ದಿದಿನ ಡೆಸ್ಕ್ : ಹಥ್ರಾಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರನ್ನು ಶನಿವಾರ ಭೇಟಿಯಾಗಲು ಹೋಗುತ್ತಿದ್ದ ಸಮಯ ಯುಪಿ ಪೊಲೀಸರು ಮತ್ತು ಕಾಂಗ್ರೆಸ್ ನಾಯಕರು ನಡುವೆ ಸಂಘರ್ಷ ಉಂಟಾಗಿತ್ತು.‌ ಈ‌ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬಳಿ ಉತ್ತರ ಪ್ರದೇಶದ ಪೊಲೀಸರು ಕ್ಷಮೆ ಕೇಳಿದ್ದಾರೆ.

ಸೆಪ್ಟೆಂಬರ್ 30ರಂದು ಪೊಲೀಸರು ನಡುವೆ ನಡೆದ ವಾಗ್ವಾದದಲ್ಲಿ ರಾಹುಲ್ ಗಾಂಧಿಯನ್ನು ಪೋಲಿಸರು ಕೆಳಗೆ ನೂಕಿ‌ ಬೀಳಿಸಿದ್ದರು. ನಂತರ ಅಕ್ಟೋಬರ್ 3ರಂದು ನಡೆದ ಗಲಾಟೆ ಯಲ್ಲಿ ಪುರುಷ ಪೊಲೀಸ್ ಅಧಿಕಾರಿಯೊಬ್ಬ ಪ್ರಿಯಾಂಕಾ ಗಾಂಧಿಯವರ ಕುರ್ತಾ ಹಿಡಿದು ತಳ್ಳುತ್ತಿರು ಪೋಟೋ‌ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಯುಪಿ ಪೊಲೀಸರ ನಡೆಯನ್ನು ತೀವ್ರವಾಗಿ ಖಂಡಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version